Saturday, November 23, 2024
Saturday, November 23, 2024

ಅಗರಬತ್ತಿ ಉದ್ಯಮಕ್ಕೆ ಬಹುದೊಡ್ಡ ರಿಲೀಫ್

ಅಗರಬತ್ತಿ ಉದ್ಯಮಕ್ಕೆ ಬಹುದೊಡ್ಡ ರಿಲೀಫ್

Date:

ನವದೆಹಲಿ: ಕಾರ್ಮಿಕ ಆಧಾರಿತ ಉದ್ಯಮವಾದ ಅಗರಬತ್ತಿ ನಿರ್ಮಾಣಕ್ಕೆ ಅಗತ್ಯದ ಕಚ್ಚಾ ವಸ್ತುವಾದ ಬಿದಿರು ಕಡ್ಡಿ ಹೊರದೇಶದಿಂದ ಅಮದುಗೊಳ್ಳುತ್ತಿತು. ಕೇಂದ್ರ ಸರಕಾರದ ಆಮದು ನಿಯಮಗಳ ಪ್ರಕಾರ ಈ ಬಿದಿರು ಕಡ್ಡಿಗಳು ‘ಪ್ಲಾಂಟ್ ಕ್ವಾರಂಟೇನ್’ ಪರೀಕ್ಷೆಗೆ ಒಳಪಡಬೇಕಾದ ಅನಿವಾರ್ಯತೆಯಿಂದ ಅಗರಬತ್ತಿ ಉದ್ಯಮಕ್ಕೆ ಅಗತ್ಯವಾದ ಬಿದಿರು ಕಡ್ಡಿಗಳು ತಕ್ಕ ಸಮಯಕ್ಕೆ ಕಾರ್ಖಾನೆ/ಕಂಪನಿಗಳಿಗೆ ತಲುಪುತ್ತಿರಲಿಲ್ಲ.

ಈ ಕಾರಣದಿಂದ 10.00 ಲಕ್ಷಕ್ಕೂ ಹೆಚ್ಚಿನ ಜನರು ಅವಲಂಬಿತವಾಗಿರುವ ಅಗರಬತ್ತಿ ಉದ್ಯಮವು ಕಚ್ಚಾವಸ್ತುವಿನ ಕೊರತೆಯನ್ನು ಅನುಭವಿಸಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಅಗರಬತ್ತಿ ಉತ್ಪಾದಕರ ಸಂಘ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿಯಾಗಿ ಉದ್ಯಮದ ಸಮಸ್ಯೆಯನ್ನು ತೋಡಿಕೊಂಡಿದ್ದರು.

ಅಗರಬತ್ತಿ ಉದ್ಯಮದ ಸಮಸ್ಯೆಯನ್ನು ಮನಗಂಡ ಕೇಂದ್ರ ಸಚಿವೆ, ಕೇಂದ್ರ ಕೃಷಿ ಇಲಾಖೆಯ ಪ್ಲಾಂಟ್ ಕ್ವಾರಂಟೈನ್ ವಿಭಾಗಕ್ಕೆ ಸೂಚನೆ ನೀಡಿ, ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿಯನ್ನು ನೀಡುವಂತೆ ಆದೇಶಿಸಿದರು. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರ ಸೂಚನೆಯಂತೆ ಕೃಷಿ ಇಲಾಖೆಯು 6.00ಎಂಎಂ ಕೆಳಗಿನ ಬಿದಿರು ಕಡ್ಡಿಗಳಿಗೆ ಪ್ಲಾಂಟ್ ಕ್ವಾರಂಟೈನ್ ಪ್ರಕ್ರಿಯೆಯಿಂದ ವಿನಾಯಿತಿಯನ್ನು ನೀಡಿ ಆದೇಶ ನೀಡಿದೆ.

ತನ್ಮೂಲಕ 10 ಲಕ್ಷಕ್ಕೂ ಹೆಚ್ಚಿನ ಜನರ ಜೀವನಾಧಾರವಾಗಿದ್ದ ಅಗರಬತ್ತಿ ಉದ್ಯಮಕ್ಕೆ ಬಹು ದೊಡ್ಡ ಸಹಾಯವಾಗಿದ್ದು, ಅಖಿಲ ಭಾರತೀಯ ಅಗರಬತ್ತಿ ಉದ್ಯಮಿಗಳ ಸಂಘಟನೆ ಸಮಸ್ತ ಉದ್ಯೋಗಿಗಳ ಪರವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕೃತಜ್ಞತೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!