ದಂತೇವಾಡ, ಸೆ.3: ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವಿನ ಎನ್ಕೌಂಟರ್ ನಲ್ಲಿ 9 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಛತ್ತೀಸ್‌ಗಢದ ದಂತೇವಾಡ-ಬಿಜಾಪುರ ಗಡಿಯ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪೊಲೀಸರ ಪ್ರಕಾರ ಘಟನಾ ಸ್ಥಳದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಕುರಿತು ಮಾತನಾಡಿದ ದಂತೇವಾಡ ಎಸ್ಪಿ ಗೌರವ್ ರೈ, ಎನ್ಕೌಂಟರ್ ನಡೆದ ಸ್ಥಳದಿಂದ ಅಪಾರ ಪ್ರಮಾಣದ ಎಸ್.ಎಲ್.ಆರ್ ರೈಫಲ್, 303 ರೈಫಲ್ ಮತ್ತು 315 ಬೋರ್ ರೈಫಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್ಕೌಂಟರ್ ನಲ್ಲಿದ್ದ ಭದ್ರತಾ ಪಡೆಗಳಿಗೆ ಯಾವುದೇ ಜೀವಹಾನಿಯಾಗಿಲ್ಲ. ನಕ್ಸಲರ ಇರುವಿಕೆಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ಪೊಲೀಸರ ಜಂಟಿ ತಂಡ ದಂತೇವಾಡ ಬಿಜಾಪುರ ಜಿಲ್ಲೆಯ ಗಡಿಯ ಪಶ್ಚಿಮ ಬಸ್ತಾರ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಎನ್ಕೌಂಟರ್ ಆರಂಭವಾಯಿತು.
ಛತ್ತೀಸ್‌ಗಢ: 9 ನಕ್ಸಲರ ವಧೆ

ಛತ್ತೀಸ್‌ಗಢ: 9 ನಕ್ಸಲರ ವಧೆ
Date: