ನವದೆಹಲಿ, ಜ.13: ಭಾರತೀಯ ರೈಲ್ವೇ ಪ್ರತಿ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಶೇ. 55 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ರೈಲು ಟಿಕೆಟ್ಗೆ 100 ರೂಪಾಯಿ ವೆಚ್ಚವಾಗಿದ್ದರೆ, ರೈಲ್ವೆ ಕೇವಲ 45 ರೂಪಾಯಿಗಳನ್ನು ವಿಧಿಸುತ್ತಿದ್ದು, 55 ರೂಪಾಯಿ ರಿಯಾಯಿತಿಯನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಭಾರತೀಯ ರೈಲ್ವೇಯು 2019-20ರಲ್ಲಿ ಪ್ರಯಾಣಿಕರ ಟಿಕೆಟ್ಗಳ ಮೇಲೆ ರೂ. 59,837 ಕೋಟಿ ಸಬ್ಸಿಡಿಯನ್ನು ನೀಡಿದೆ ಮತ್ತು ರಿಯಾಯಿತಿ ಇನ್ನೂ ಮುಂದುವರೆಯಲಿದೆ ಎಂದು ಕಳೆದ ವರ್ಷ ನವೆಂಬರ್ನಲ್ಲಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.