Sunday, January 19, 2025
Sunday, January 19, 2025

ವರ್ಡ್ ಕ್ಯಾಂಪ್ ಬೆಂಗಳೂರು 2024; ವರ್ಡ್ ಪ್ರೆಸ್ ಕುಟುಂಬವನ್ನು ಒಟ್ಟುಗೂಡಿಸುವ ಸಂಕಲ್ಪ

ವರ್ಡ್ ಕ್ಯಾಂಪ್ ಬೆಂಗಳೂರು 2024; ವರ್ಡ್ ಪ್ರೆಸ್ ಕುಟುಂಬವನ್ನು ಒಟ್ಟುಗೂಡಿಸುವ ಸಂಕಲ್ಪ

Date:

ರ್ಡ್ ಪ್ರೆಸ್ ಕುಟುಂಬದ ಸದಸ್ಯರಾದ ಡೆವಲಪರ್ಸ್, ಡಿಸೈನರ್ಸ್ ಗಳು, ಬಿಸ್ನೆಸ್ ಮಾಲಕರು ಮತ್ತು ವರ್ಡ್ ಪ್ರೆಸ್ ಆಸಕ್ತರೆಲ್ಲರೂ ಬೆಂಗಳೂರಿನಲ್ಲಿ ಒಂದೆಡೆ ಸೇರಿ ತಮ್ಮ ಅಮೂಲ್ಯವಾದ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಹೌದು, ಬಹುನಿರೀಕ್ಷಿತ ವರ್ಡ್ ಪ್ರೆಸ್ 2024 ಜುಲೈ 21 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ವರ್ಣರಂಜಿತ ಸಮಾರಂಭವು ಬೆಂಗಳೂರಿನ ಮ್ಯೂಸಿಯಂ ರಸ್ತೆಯ ಸಂತ ಜೋಸೆಫ್ ಬಾಯ್ಸ್ ಹೈ ಸ್ಕೂಲ್ ನಲ್ಲಿ ನಡೆಯಲಿದ್ದು, ಅಂದು ವಿವಿಧ ಅರ್ಥಗರ್ಭಿತ, ಬಹುಉಪಯೋಗಿ, ವೈವಿಧ್ಯಮಯ ವಿಚಾರಗೋಷ್ಠಿಗಳು ನಡೆಯಲಿವೆ.

ವಿಚಾರಗೋಷ್ಠಿಗಳ ಸರಮಾಲೆ: ಈ ಕಾರ್ಯಕ್ರಮ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ರೆಂಡ್ ಆಗುತ್ತಿದೆ. ವರ್ಡ್ ಪ್ರೆಸ್ ಬಳಕೆದಾರರಿಗೆ ಅನುಕೂಲವಾಗುವ ಹಿತದೃಷ್ಠಿಯಲ್ಲಿ ವೈವಿಧ್ಯಮಯ ಗೋಷ್ಠಿಗಳು ನಡೆಯಲಿವೆ. ವರ್ಡ್ ಪ್ರೆಸ್ ಗೆ ಹೊಸತಾಗಿ ಸೇರ್ಪಡೆಗೊಂಡ ಬಳಕೆದಾರರಿಗೆ ಉಪಯುಕ್ತ ಅರಿವು ಕಾರ್ಯಾಗಾರಗಳಾದ ಲೈಟನಿಂಗ್ ಟಾಕ್ಸ್, ವರ್ಡ್ ಪ್ರೆಸ್ ನ್ನು ಸುದೀರ್ಘವಾಗಿ ಬಳಸುತ್ತಿರುವವರಿಗಾಗಿ ಅಡ್ವಾನ್ಸ್ಡ್ ಟಾಕ್ಸ್, ಪ್ರಾಯೋಗಿಕ ಜ್ಞಾನವನ್ನು ವಿಸ್ತರಿಸಲು ಹ್ಯಾಂಡ್ಸ್ ಆನ್ ವರ್ಕ್ ಶಾಪ್ಸ್, ತಜ್ಞರಿಂದ ಪ್ಯಾನೆಲ್ ಚರ್ಚೆಗಳನ್ನು ವರ್ಡ್ ಕ್ಯಾಂಪ್ ಬೆಂಗಳೂರು 2024 ಒಳಗೊಂಡಿವೆ.

ಪರಸ್ಪರ ಪರಿಚಯ, ಸಂಬಂಧ ಬಲಗೊಳ್ಳುವಿಕೆಗೆ ಒತ್ತು: ವರ್ಡ್ ಕ್ಯಾಂಪ್ ಬೆಂಗಳೂರು 2024 ಕಾರ್ಯಕ್ರಮಕ್ಕೆ ಕಂಟೆಂಟ್ ಕ್ರಿಯೇಟರ್ಸ್, ಮಾಲಕರು, ವೆಬ್ ಡೆವಲಪರ್ಸ್, ಡಿಸೈನರ್ಸ್ ಸೇರಿದಂತೆ ಸುಮಾರು 500 ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ. ಇದರಿಂದ ನೂತನ ವ್ಯಾಪಾರ ಒಪ್ಪಂದ ಮತ್ತು ಭಾಗವಹಿಸುವಿಕೆಗೆ ಪರಿಣಾಮಕಾರಿಯಾದ ವೇದಿಕೆ ಕಲ್ಪಿಸಿದಂತಾಗುತ್ತದೆ.

ಕಾರ್ಯಕ್ರಮದ ಸ್ಥಳಕ್ಕೆ ಸುಲಭವಾಗಿ ತಲುಪಬಹುದು: ಕಾರ್ಯಕ್ರಮ ನಡೆಯುವ ಬೆಂಗಳೂರಿನ ಮ್ಯೂಸಿಯಂ ರಸ್ತೆಯ ಸಂತ ಜೋಸೆಫ್ ಬಾಯ್ಸ್ ಹೈ ಸ್ಕೂಲ್ ಸಭಾಂಗಣಕ್ಕೆ ದೇಶದ ವಿವಿಧ ನಗರಗಳಿಂದ ಆಗಮಿಸುವ ಪ್ರತಿನಿಧಿಗಳು ಸುಲಭವಾಗಿ ತಲುಪಬಹುದು. ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಪ್ರದೇಶಗಳಿಂದ ಸುಲಭವಾಗಿ ಕಾರ್ಯಕ್ರಮ ನಡೆಯುವ ಸ್ಥಳವನ್ನು ತಲುಪಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!