ಬೆಳಗಾವಿ, ಡಿ.15: ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಗಾಜನೂರು ಬಳಿ ಹೊಸದಾಗಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸ್ಥಳ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಶೀಘ್ರವೇ ಅರಣ್ಯ ಇಲಾಖೆಯಿಂದ ಎನ್.ಒ.ಸಿ ಪಡೆದು ಕಾಮಗಾರಿ ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ. ಎನ್.ಒ.ಸಿ ಲಭಿಸದಿದ್ದರೆ, ಸೂಕ್ತವಾದ ಬದಲಿ ಜಾಗವನ್ನು ಸಹ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ನಗರಾಭಿವದ್ದಿ ಸಚಿವರಾದ ಬೈರತಿ ಸುರೇಶ್ ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು.
ಶಿವಮೊಗ್ಗದ ಗಾಜನೂರು ಬಳಿ ನೀರು ಶುದ್ಧೀಕರಣ ಘಟಕ
ಶಿವಮೊಗ್ಗದ ಗಾಜನೂರು ಬಳಿ ನೀರು ಶುದ್ಧೀಕರಣ ಘಟಕ
Date: