ಬೆಂಗಳೂರು, ಸೆ. 10: ರಾಜ್ಯ ಸರ್ಕಾರ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿ ಮಿತಿ ರದ್ದುಪಡಿಸಿದೆ. ಇದರಿಂದ ಪ್ರತಿ ನೇಕಾರರಿಗೆ ವಾರ್ಷಿಕ ಕನಿಷ್ಠ ರೂ.40,000 ಉಳಿತಾಯವಾಗಲಿದೆ. 10 ಪಿ.ಎಚ್. ನಂತರ ತಿಂಗಳಿಗೆ ಎಷ್ಟೇ ವಿದ್ಯುತ್ ಬಳಕೆ ಮಾಡಿದರೂ ಪ್ರತಿ ಯೂನಿಟ್‌ಗೆ ರೂ.1.25 ಮಾತ್ರ ಪಾವತಿಸಬೇಕು. ಸರ್ಕಾರದ ಈ ನಿರ್ಧಾರದಿಂದ 4 ಸಾವಿರ ಘಟಕಗಳಿಗೆ ಅನುಕೂಲವಾಗಲಿದೆ ಎಂದು ಜವಳಿ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ.
ವಿದ್ಯುತ್ ಮಗ್ಗಗಳ ಸಬ್ಸಿಡಿ ಮಿತಿ ರದ್ದು
ವಿದ್ಯುತ್ ಮಗ್ಗಗಳ ಸಬ್ಸಿಡಿ ಮಿತಿ ರದ್ದು
Date: