ಬೆಂಗಳೂರು, ಫೆ.19: ಮುಂಬರುವ ಶೈಕ್ಷಣಿಕ ವರ್ಷದಿಂದ ಸ್ಕಿಲ್ ಅಟ್ ಸ್ಕೂಲ್ ಹೆಸರಲ್ಲಿ 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿಗಳು ಈವರೆಗೂ ಪಿಯುಸಿ ಹಂತದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಷಯದ ಕೋರ್ಸ್‌ಗಳನ್ನು ಮಾತ್ರ ಕಲಿಯುತ್ತಿದ್ದರು. ಈಗ 25 ಕೋರ್ಸ್ ಕಲಿಯಲು ಅವಕಾಶವಿದೆ. ಅದರಲ್ಲಿ ಕೆಲವು ಕೌಶಲ ಆಧಾರಿತ ಕೋರ್ಸ್‌ಗಳಿದ್ದು, ಸ್ಕಿಲ್ ಅಟ್ ಸ್ಕೂಲ್ ಕಾರ್ಯಕ್ರಮ ರೂಪಿಸಲಾಗಿದೆ. ಸರ್ಕಾರದ ಸಂಪನ್ಮೂಲ ಬಳಸಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಶಿಕ್ಷಣ ನೀಡಲು ಕ್ರಮ

ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಶಿಕ್ಷಣ ನೀಡಲು ಕ್ರಮ
Date: