ಕೋಲಾರ: ಹಣ ಮತ್ತು ಚಿನ್ನದ ಆಸೆಗಾಗಿ ಪಕ್ಕದ ಮನೆಯ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಬಂಗಾರಪೇಟೆ ಶಾಂತಿನಗರದಲ್ಲಿ ಸಂಭವಿಸಿದೆ. ವೃದ್ಧೆ ಗೀತಾ ಎಂಬವರನ್ನು ಕೊಲೆ ಮಾಡಿ ಅವರ ಒಡವೆಗಳನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಕೊಲೆಯಾದ ವೃದ್ಧೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಶಾಂತಾಬಾಯಿ(70) ಹಾಗೂ ಆನಂದ್ ಕಿರಣ್ ಶಿಂದೆ (47) ಬಂಧಿತರು. ಕೊಲೆಯಾದ ವೃದ್ಧೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಕ್ಕದ ಮನೆಯ ಈ ಇಬ್ಬರು ಮನೆಗೆ ಬಂದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.