ಮಂಗಳೂರು, ಮೇ 15: ಕೆನರಾ ವಿಕಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರ ನಡೆಯಿತು. ಕೆನರಾ ಹೈ ಸ್ಕೂಲ್ ಅಸೋಸಿಯೇಷನ್ ನ ಕೋಶಾಧಿಕಾರಿ ಸಿಎ, ಎಂ. ವಾಮನ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವೃತ್ತಿಯ ಬಗ್ಗೆ ತಿಳಿದು ಆಯ್ಕೆ ಮಾಡುವ ಅವಕಾಶವಿರಲಿಲ್ಲ. ಈ ಕುರಿತು ಪೋಷಕರನ್ನು ಅವಲಂಬಿಸುತ್ತಿದ್ದರು. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕೆನರಾ ವಿಕಾಸ ಸಮೂಹ ಸಂಸ್ಥೆಗಳ ಸಂಯೋಜಕರಾದ ಪಾರ್ಥಸಾರಥಿ ಪಾಲೆಮಾರ್, ಕೆನರಾ ವಿಕಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಐಶ್ವರ್ಯ ಕೆ., ಅಲೆನ್ ಕೆರಿಯರ್ ಸಂಸ್ಥೆಯ ಮಂಗಳೂರು ಕೇಂದ್ರದ ಮುಖ್ಯಸ್ಥರಾದ ವಿಪಿನ್ ನಾರಾಯಣನ್ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಲೆನ್ ಕೆರಿಯರ್ ಸಂಸ್ಥೆಯ ಮಂಗಳೂರು ಕೇಂದ್ರದ ಮುಖ್ಯಸ್ಥರಾದ ವಿಪಿನ್ ನಾರಾಯಣನ್, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಂತ ಅಲೋಶಿಯಸ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಅರ್ಜುನ್ ಪ್ರಕಾಶ್ ಹಾಗೂ ಯುನಿ ಅಬ್ರಾಡ್ ನ ಯುಕೆ ಆಧಾರಿತ ಕಂಪೆನಿ ಮಂಗಳೂರು ಬ್ರಾಂಚ್ ನ ಡೆಸ್ಟಿನೇಷನ್ ಎಕ್ಸ್ ಪರ್ಟ್ ಇಶಾನ್ ವರ್ತಕ್ ಮಾರ್ಗದರ್ಶನ ನೀಡಿದರು. ಉಪನ್ಯಾಸಕರಾದ ಹನೂಬ್ ಕೆ.ಸಿ ಸ್ವಾಗತಿಸಿ, ಅಕ್ಷತಾ ಆಚಾರ್ಯ ನಿರೂಪಿಸಿದರು.