ಬೆಂಗಳೂರು, ಆ.8: ರಾಜ್ಯದಲ್ಲಿನ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಸುರಕ್ಷತೆಗೆ ಪ್ರತಿ 30 ಕಿ.ಮೀ.ಗೆ ಒಬ್ಬರಂತೆ 1,500 ಮಂದಿ ಮೈಲಿಗೂಲಿಗಳನ್ನು ನೇಮಕ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ರಸ್ತೆಯಲ್ಲಿ ನೀರು ನಿಂತರೆ ತಕ್ಷಣ ಹೊರಹಾಕುವುದು, ಗುಂಡಿ ಬಿದ್ದರೆ ಮುಚ್ಚುವುದು, ಒತ್ತುವರಿ ಆಗದಂತೆ ನಿಗಾ ವಹಿಸುವುದು ಅವರ ಕೆಲಸ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಮೈಲಿಗೂಲಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.