ಬೆಂಗಳೂರು/ ಉಡುಪಿ: ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದು ಶೇ. 99.9 ಫಲಿತಾಂಶ ಬಂದಿದೆ. ಓರ್ವ ವಿದ್ಯಾರ್ಥಿನಿ ಹೊರತುಪಡಿಸಿ ಪರೀಕ್ಷೆಗೆ ಹಾಜರಾಗಿದ್ದ ಉಳಿದೆಲ್ಲರೂ ಉತ್ತೀರ್ಣರಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುದ್ಧಿಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದರು.
90ರಿಂದ 100 ಅಂಕಗಳನ್ನು ಎ+ ಎಂದು ಪರಿಗಣಿಸಲಾಗಿದ್ದು ಒಟ್ಟು 1,28,931 ವಿದ್ಯಾರ್ಥಿಗಳಿಗೆ, ಅಂದರೆ ಉತ್ತೀರ್ಣರಾಗಿರುವ ಶೇ. 16.52 ವಿದ್ಯಾರ್ಥಿಗಳಿಗೆ ಎ+ ಸಿಕ್ಕಿದೆ.
80 ರಿಂದ 89 ಅಂಕಗಳನ್ನು ಎ ಎಂದು ಪರಿಗಣಿಸಲಾಗಿದ್ದು ಒಟ್ಟು 2,50,317 ವಿದ್ಯಾರ್ಥಿಗಳಿಗೆ, ಅಂದರೆ ಉತ್ತೀರ್ಣರಾಗಿರುವ ಶೇ. 32.07 ವಿದ್ಯಾರ್ಥಿಗಳಿಗೆ ಎ ಸಿಕ್ಕಿದೆ.
60ರಿಂದ 79 ಅಂಕಗಳನ್ನು ಬಿ ಎಂದು ಪರಿಗಣಿಸಲಾಗಿದ್ದು ಒಟ್ಟು 2,87,684 ವಿದ್ಯಾರ್ಥಿಗಳಿಗೆ, ಅಂದರೆ ಉತ್ತೀರ್ಣರಾಗಿರುವ ಶೇ. 36.86 ವಿದ್ಯಾರ್ಥಿಗಳಿಗೆ ಬಿ ಸಿಕ್ಕಿದೆ.
35ರಿಂದ 59 ಅಂಕಗಳನ್ನು ಸಿ ಎಂದು ಪರಿಗಣಿಸಲಾಗಿದ್ದು ಒಟ್ಟು 1,13,610 ವಿದ್ಯಾರ್ಥಿಗಳಿಗೆ, ಅಂದರೆ ಉತ್ತೀರ್ಣರಾಗಿರುವ ಶೇ. 14.55 ವಿದ್ಯಾರ್ಥಿಗಳಿಗೆ ಸಿ ಸಿಕ್ಕಿದೆ. ಸಿ ಸಿಕ್ಕಿದ ಶೇ 9 ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಲಭಿಸಿದೆ.