ಬೆಂಗಳೂರು, ಅ.9: ವಿಜ್ಞಾನದ ಹಲವು ಕುತೂಹಲಕಾರಿ ಸಂಗತಿಗಳು ಬೆಂಗಳೂರಿನ ವಿಜ್ಞಾನ ಗ್ಯಾಲರಿಯಲ್ಲಿ ಅನಾವರಣಗೊಂಡಿದೆ. ಏಷ್ಯಾದ ಅತಿ ದೊಡ್ಡ ಸೈನ್ಸ್ ಗ್ಯಾಲರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಗ್ಯಾಲರಿ ವೀಕ್ಷಕರನ್ನು ಸೆಳೆಯುತ್ತಿದೆ.
ಬೆಂಗಳೂರು ವಿಜ್ಞಾನ ಗ್ಯಾಲರಿಯಲ್ಲಿ ʼಸೈ 650ʼ ಹೆಸರಿನಲ್ಲಿ ಪ್ರದರ್ಶನ ನಡೆಯುತ್ತಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ವಿದ್ಯಾರ್ಥಿಗಳ ತಂಡ ಆಗಮಿಸಿದರೆ ವಾಕ್ ಥ್ರೂ ಮೂಲಕ ಇಡೀ ವಿಜ್ಞಾನ ಗ್ಯಾಲರಿಯ ನಾನಾ ವಿಭಾಗಗಳನ್ನು ತೋರಿಸಲು ಉತ್ಸಾಹಿ ತಂಡ ಇಲ್ಲಿದೆ. 30 ವಿಭಾಗಗಳಲ್ಲಿ ವಿಜ್ಞಾನ ಮಾದರಿಗಳಿವೆ. ಸೋಮವಾರ ಮತ್ತು ಮಂಗಳವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೆ ಸೈನ್ಸ್ ಗ್ಯಾಲರಿ ತೆರೆದಿರುತ್ತದೆ. ನೀವೂ ಭೇಟಿ ನೀಡಬಹುದು.