Tuesday, February 25, 2025
Tuesday, February 25, 2025

ಸಂಶೋಧನೆ ಶ್ರಮದ ಫಲ: ಡಾ. ಭಟ್

ಸಂಶೋಧನೆ ಶ್ರಮದ ಫಲ: ಡಾ. ಭಟ್

Date:

ಮೂಡುಬಿದಿರೆ, ಅ.25: ಸಂಶೋಧನೆ ಮಾನಸಿಕ ಸದೃಢತೆ, ಶ್ರಮ, ಅಧ್ಯಯನ, ತರ್ಕ, ತಾರ್ಕಿಕ ಚಿಂತನೆಗಳ ಒಟ್ಟು ಫಲ ಎಂದು ಸಿದ್ದಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ‍್ಯ ಡಾ. ಅಜಕ್ಕಳ ಗಿರೀಶ್ ಭಟ್ ಹೇಳಿದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಫೋರಮ್‌ ವತಿಯಿಂದ ಗುರುವಾರ ಪಿಜಿ ಸೆಮಿನಾರ್ ಹಾಲ್ ನಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಶೋಧನ ಕ್ಷೇತ್ರಕ್ಕೆ ಬರುವ ಮೊದಲು ವಿದ್ಯಾರ್ಥಿಗಳು ಓದು, ಚರ್ಚೆ ಮತ್ತು ಬೌದ್ಧಿಕ ಚಿಂತನೆಯ ಮೂಲಕ ಮಾನಸಿಕವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ವಿಜ್ಞಾನ ಸಂಶೋಧನೆಯು ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಕಾರಣವಾದರೆ, ಸಮಾಜ ವಿಜ್ಞಾನದ ಸಂಶೋಧನೆಗಳು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರ ಜೊತೆಗೆ ನೀತಿ ನಿಯಮಗಳ ಮೇಲೆ ಪ್ರಭಾವ ಬೀರಿ ಆಡಳಿತ, ಪರಿಸರ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯ ತಾತ್ಪರ್ಯ ಪ್ರಶ್ನೆ ಮಾಡಿ ಉತ್ತರ ತಿಳಿಯುವುದಾಗಿದೆಯೇ ಹೊರತು ಗುಲಾಮನಾಗಿರುವುದಲ್ಲ. ಯಶಸ್ಸಿಗೆ ಭಾಷೆ ಮುಖ್ಯ. ವಿಷಯದ ಬಗ್ಗೆ ಜ್ಞಾನವಿದ್ದರು, ಇನ್ನೊಬ್ಬರಿಗೆ ತಿಳಿಸಲು ಭಾಷೆ ಮುಖ್ಯ ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಅಧಿಕಾರಿ ಪ್ರೊ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಮ್ಮ ಜೀವನದ ಸಾರ್ಥಕತೆಯ ಕ್ಷಣ ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸಿದಾಗ ಪಡೆಯಲು ಸಾಧ್ಯ ಎಂದರು. ಪ್ರಾಚಾರ‍್ಯ ಡಾ. ಕುರಿಯನ್ ಮಾತನಾಡಿ, ಸಮಾಜಕಾರ‍್ಯ ವಿಭಾಗದ ಫೋರಮ್ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿಡಲು ಸಾಧ್ಯ ಎಂದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ಕೆ., ಫೊರಮ್ ಸಂಯೋಜಕ ಕೃಷ್ಣಮೂರ್ತಿ ಬಿ., ಸಮಾಜಕಾರ್ಯ ಫೋರಮ್‌ನ ಅಧ್ಯಕ್ಷ ಶ್ರೇಯಸ್ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ವಾತಿ ನಿರೂಪಿಸಿದರು. ಅತುಲ್ ಸ್ವಾಗತಿಸಿ, ಮಂಜುಶ್ರೀ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!