ಮುಲ್ಕಿ, ಫೆ.16: ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ‘ಅರಸು ರಕ್ಷಕ್ ಯೋಜನೆ’ ಅಡಿಯಲ್ಲಿ ಫೆಬ್ರವರಿ ತಿಂಗಳ ಫಲಾನುಭವಿಯಾಗಿ ತಾಳಿಪಾಡಿ ಕಿನ್ನಿಗೋಳಿ ಪರಿಸರದ ಫಲಾನುಭವಿಗೆ ಹತ್ತು ಸಾವಿರ ರೂಪಾಯಿ ಸಹಾಯಧನ ನೀಡಲಾಯಿತು. ‘ನಿಮ್ಮೊಂದಿಗೆ ನಾವು ಇದ್ದೇವೆ’ ಎಂಬ ಸಂದೇಶವನ್ನು ಅರಮನೆ ವತಿಯಿಂದ ನೀಡಲಾಯಿತು.
ಅರಮನೆಯ ಗೌತಮ್ ಎಂ ಜೈನ್, ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷರಾದ ವಸಂತ ಬರ್ನಾಡ್, ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿನೋದ್ ಸಾಲಿಯಾನ್ ಬೆಳ್ಳಾಯ, ಮಹೀಮ್ ಹಗ್ಡೆ, ಮುಲ್ಕಿ, ಸತೀಶ್ ಶೆಟ್ಟಿ ಪಡುಪಣಂಬೂರು, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಮಿಥುನ್ ಅಮಿನ್ ಕಾರ್ನಾಡ್ ಮೊದಲಾದವರು ಇದ್ದರು.