ಬೆಂಗಳೂರು: ನಂದಿನಿ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಳ ಮಾಡುವ ಕುರಿತು ನಿರ್ಧರಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದರ ಏರಿಕೆಯನ್ನು ಮುಂದೂಡಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದರು.
ಪರಿಷ್ಕೃತ ದರ: ಸಮೃದ್ಧಿ ಹಾಲಿನ ದರ ರೂ. 50, ಹೋಮೋಜಿನೈಸ್ಡ್ ಹಾಲಿನ ದರ ರೂ. 40, ಹೊಮೊಜಿನೈಸ್ಡ್ ಹಸುವಿನ ಹಾಲಿನ ದರ ರೂ. 44, ಟೋನ್ಡ್ ಹಾಲಿನ ದರ ರೂ. 39, ಸ್ಪೆಷಲ್ ಹಾಲಿನ ದರ ರೂ. 45, ಶುಭಂ ಹಾಲಿನ ದರ ರೂ, 45, ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲಿನ ದರ ರೂ. 46, ಸಂತೃಪ್ತಿ ಹಾಲು ದರ ರೂ. 52, ಡಬಲ್ ಟೋನ್ಡ್ ಹಾಲು ದರ ರೂ. 38, ಮೊಸರಿನ ದರ ರೂ. 47.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಂದಿನ ಉತ್ಪನ್ನಗಳ ದರ ಹೆಚ್ಚಳ ಸಂಬಂಧ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.