Wednesday, February 5, 2025
Wednesday, February 5, 2025

ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆ

ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆ

Date:

ಬೆಂಗಳೂರು, ಡಿ.26: ತನ್ನ ಉತ್ಕೃಷ್ಟ ಗುಣಮಟ್ಟ ಮತ್ತು ರುಚಿಗೆ ಹೆಸರುವಾಸಿಯಾಗಿರುವ ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಈಗ ಪ್ರೋಟೀನ್‌ಯುಕ್ತ ಇಡ್ಲಿ ಹಾಗೂ ದೋಸೆ ಹಿಟ್ಟಿನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಬದಲಾದ ಜೀವನಶೈಲಿಯಿಂದಾಗಿ ನಗರ ಪ್ರದೇಶಗಳ‌ ಜನರು ಹೆಚ್ಚೆಚ್ಚು ಸಿದ್ಧಪಡಿಸಲಾದ ಆಹಾರ ಉತ್ಪನ್ನಗಳ ಮೊರೆ ಹೋಗುತ್ತಿರುವುದನ್ನು ಮನಗಂಡು, ಆರೋಗ್ಯಕರವಾದ ಹಾಗೂ ರುಚಿಕರವಾದ ಇಡ್ಲಿ ಮತ್ತು ದೋಸೆಹಿಟ್ಟನ್ನು ಗ್ರಾಹಕರಿಗೆ ಒದಗಿಸಲು ನಿರ್ಧರಿಸಿ, ಈ ನೂತನ ಉತ್ಪನ್ನವನ್ನು ಪರಿಚಯಿಸಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ನಂದಿನಿ ಬ್ರ್ಯಾಂಡ್‌ನ ಇಡ್ಲಿ / ದೋಸೆ ಹಿಟ್ಟನ್ನು ಎರಡು ವಿಧದ ಪ್ಯಾಕ್‌ಗಳಲ್ಲಿ ಅಂದರೆ 450 ಗ್ರಾಂ.ಗೆ ರೂ.40 ಹಾಗೂ 900 ಗ್ರಾಂ.ಗೆ ರೂ.80 ರಂತೆ ಮಾರಾಟ ದರ ನಿಗದಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಶ್ರೀ ಹೊಸ ಮಾರಿಗುಡಿ: ಧಾರ್ಮಿಕ ಸಭಾ ಕಾರ್ಯಕ್ರಮ

ಕಾಪು, ಫೆ.5: ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ...

ಕಾಪು: ಪ್ರಯೋಗಾಲಯ ಉದ್ಘಾಟನೆ

ಕಾಪು, ಫೆ.5: ಅಮೆರಿಕೇರ್ ಹಾಗೂ ಅಬೊಟ್ ಸಂಸ್ಥೆ ಸಹಕಾರದೊಂದಿಗೆ ಮಣಿಪುರ ಪ್ರಾಥಮಿಕ...

ಮಹಾಕುಂಭ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಪ್ರಯಾಗರಾಜ್, ಫೆ.5: ಕಿತ್ತಳೆ ಬಣ್ಣದ ಪೂರ್ಣ ತೋಳಿನ ಜೆರ್ಸಿ, ನೀಲಿ ಬಣ್ಣದ...

ಸಂಸ್ಕೃತಿ ಉತ್ಸವ 2025

ಉಡುಪಿ, ಫೆ.5: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು...
error: Content is protected !!