ಉಡುಪಿ: ಜಲಾಯನ ಅಭಿವೃದ್ಧಿ ಇಲಾಖೆ, ಬೆಂಗಳೂರು ವತಿಯಿಂದ ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಒಗ್ಗೂಡಿಸಿ ಅವರ ಉತ್ಪನ್ನಗಳಿಗೆ ವಿಶಿಷ್ಟ ಹಾಗೂ ವಿನೂತನವಾದ ಏಕರೂಪ ಬ್ರ್ಯಾಂಡಿಂಗ್ ಅನ್ನು ವಿನ್ಯಾಸಗೊಳಿಸಿ, ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಲುವಾಗಿ ರೈತ ಉತ್ಪಾದಕ ಸಂಸ್ಥೆಗಳಿಗೆ ಏಕರೂಪ ಬ್ರಾಂಡ್ ರೂಪಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ರೈತರು, ಗ್ರಾಹಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಅತ್ಯುತ್ತಮ ಬ್ರಾಂಡ್, ವಿಶಿಷ್ಟ ಅಡಿ ಬರಹ ಹಾಗೂ ಆಕರ್ಷಕವಾದ ಲೋಗೋಗಳಿಗೆ ಪ್ರಥಮ 75,000 ರೂ., ದ್ವಿತೀಯ 50,000 ಹಾಗೂ ತೃತೀಯ 25,000 ರೂ. ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಜೂನ್ 11 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://challenge.coefpo.org/ ಅಥವಾ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಉಡುಪಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.