ಬೆಂಗಳೂರು, ಆ.9: ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಯ ಆಧಾರಿತ 216 ನೇ ಫಲಪುಷ್ಪ ಪ್ರದರ್ಶನವು ಆಗಸ್ಟ್ 19ರ ವರೆಗೆ ನಡೆಯಲಿದೆ.
ಬಣ್ಣ ಬಣ್ಣದ ಹೂಗಳಲ್ಲಿ ಅರಳಿದ ಸಂಸತ್ ಭವನ, ಅದರ ಮೇಲೆ ರಾಷ್ಟ್ರ ಲಾಂಛನ, ನೂರಾರು ಪುಷ್ಪಗಳ ಮಧ್ಯೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನೋಡುಗರ ಕಣ್ಮನ ಸೆಳೆಯುತ್ತಿದೆ. ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ 12 ಲಕ್ಷ ಜನರು ಬರುವ ನಿರೀಕ್ಷೆ ಇದೆ. ದೇಶದ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಫಲಪುಷ್ಪ ಪ್ರದರ್ಶನಕ್ಕೆ ಬಳಸಲಾಗಿದೆ.