Monday, January 20, 2025
Monday, January 20, 2025

ಅ.8: ಕಾಸರಗೋಡಿನಲ್ಲಿ ‘ಕನ್ನಡ ಕಲರವ’ ಸಾಂಸ್ಕೃತಿಕ ಉತ್ಸವ

ಅ.8: ಕಾಸರಗೋಡಿನಲ್ಲಿ ‘ಕನ್ನಡ ಕಲರವ’ ಸಾಂಸ್ಕೃತಿಕ ಉತ್ಸವ

Date:

ಮಂಗಳೂರು, ಅ.4: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಕನ್ನಡ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ಅಕ್ಟೋಬರ್ 8 ರವಿವಾರ ಬೆಳಿಗ್ಗೆ 9:00 ರಿಂದ ರಾತ್ರಿ 9 ಗಂಟೆಯವರೆಗೆ ಕಾಸರಗೋಡಿನ ಹೋಟೆಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಕೀಲ ಮತ್ತು ಕಾಂಗ್ರೆಸ್ ಮುಖಂಡ ಎಂ ಗುರುಪ್ರಸಾದ್ ಮಂಡ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆ.ಎಸ್.ಎಸ್.ಎ.ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಎ. ನೆಲ್ಲಿಕುನ್ನಿ, ಮಂಜೇಶ್ವರ ಜಿ.ಪಿ.ಎಂ.ಸಿ ಪ್ರಾಧ್ಯಾಪಕ ಶಿವಶಂಕರ್, ಬಿ.ಇ.ಎಂ ಪ್ರೌಢಶಾಲೆ ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ , ಹೊಟೇಲ್ ಉಡುಪಿ ಗಾರ್ಡನ್ ಮಾಲಕ ರಾಮಪ್ರಸಾದ್ ಕಾಸರಗೋಡು ಮುಂತಾದವರು ಭಾಗವಹಿಸಲಿದ್ದಾರೆ.

ಸಮಾಜ ಸೇವೆಗಾಗಿ ಝುಲ್ಫಿಕರ್ ಆಲಿ, ಮಾಧ್ಯಮ ಕ್ಷೇತ್ರದಲ್ಲಿ ಗಂಗಾಧರ್ ಯಾದವ್, ಕನ್ನಡ ಸೇವೆಗಾಗಿ ಶಿವರಾಮ ಕಾಸರಗೋಡು ಇವರಿಗೆ ಸನ್ಮಾನ ನಡೆಯಲಿದೆ. ‘ಕಾಸರಗೋಡಿನಲ್ಲಿ ಕನ್ನಡ ಹೋರಾಟ’ ವಿಚಾರದ ಕುರಿತಾಗಿ ರಾಧಾಕೃಷ್ಣ ಉಳಿಯತಡ್ಕ ಹಾಗೂ ‘ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿಗತಿ’ ವಿಚಾರದ ಕುರಿತಾಗಿ ಎಸ್.ಎನ್.ಭಟ್ ಸೈಪಂಗಲ್ ಉಪನ್ಯಾಸ ನೀಡಲಿದ್ದಾರೆ. ಡಾ. ಬೇ.ಸಿ. ಗೋಪಾಲಕೃಷ್ಣ ಏತಕ್ಕ ಇವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ರುದ್ರಮ್ಮ ಎಸ್.ವಜ್ರಬಂಡಿ ರಾಯಚೂರು, ಉಮಾದೇವಿ ಬಸನಗೌಡ ರಾಯಚೂರು, ಮಲ್ಲಿಕಾ ಎಮ್ ಜಾಲವಾಡಗಿ ರಾಯಚೂರು, ಬೀರಪ್ಪ ಶಂಭೋಜಿ ಸಿಂಧನೂರ ರಾಯಚೂರು, ಅಂಬಿಕಾ ಗುಂಡಪ್ಪ ರಾಯಚೂರು, ಮುತ್ತಕ್ಕ ಬೆನಕನಹಳ್ಳಿ ಹಾವೇರಿ, ಬಸಮ್ಮ ಹಿರೇಮಠ ರಾಯಚೂರು, ಪ್ರಣತಿ ಎನ್, ವೆಂಕಟ ಭಟ್ ಎಡನೀರು, ನರಸಿಂಹ ಭಟ್ ಏತಡ್ಕ, ಜಿ. ವೀರೇಶ್ವರ ಭಟ್ ಕರ್ಮಕರ್ , ಹಮೀದ್ ಹಸನ್ ಮಾಡೂರು, ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ವಿರಾಜ್ ಅಡೂರು, ಸುಶೀಲ ಪದ್ಯಾಣ ನೀರ್ಚಾಲು, ಪದ್ಮಾವತಿ ಕೆದಿಲಾಯ, ನರೇಂದ್ರ ಕುಮಾರ್ ಕೆ ಬೇಕಲಕೋಟೆ, ಗಿರೀಶ್ ಪಿ. ಎಮ್ ಚಿತ್ತಾರಿ, ಉಮೇಶ ಶಿರಿಯ, ಸೌಮ್ಯ ಆರ್ ಶೆಟ್ಟಿ ಕುಂಜತ್ತೂರು, ರೇಖಾ ರೋಶನ್ ಆಣಂಗೂರು ಕಾಸರಗೋಡು, ಗಂಗಾಧರ್ ಗಾಂಧಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಭಾಗವಹಿಸಲಿದ್ದಾರೆ.

ಸೌಮ್ಯ ಶ್ರೀಕಾಂತ್ ಮತ್ತು ಸೌರಮ್ಯ ಸೈಜು ಮಧೂರು ತಂಡದವರಿಂದ ನಾಟ್ಯ ಸಿಂಚನ ನಡೆಯಲಿದೆ. ಡಾ. ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ನೇತೃತ್ವದ ಗಡಿನಾಡ ಸಾಂಸ್ಕೃತಿಕ ಸಂಘ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಶ್ರೀರಕ್ಷಾ ಸರ್ಪಂಗಳ ಮತ್ತು ತಂಡದವರಿಂದ ಗೀತ ಗಾಯನ ಹಾಗೂ ಸಮೂಹ ಗಾಯನ ನಡೆಯಲಿದೆ ಎಂದು ಕೆ.ಎಸ್.ಎಸ್.ಎ.ಪಿ ಕಾರ್ಯದರ್ಶಿ ಕಲಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!