ತುಮಕೂರು, ನ.13: ಚೀನದಲ್ಲಿ ನೆಡೆದ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಮಾಕನಹಳ್ಳಿ ಶರತ್ ಅವರು ಶುಕ್ರವಾರದ ಕೋಟೆ ಬಾಗಿಲಿನ ಶಕ್ತಿ ಮಾತೆ ಶ್ರೀ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮನವರ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ದೇವಾಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶರತ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹಾರಗಳನ್ನು ಹೊದಿಸಿ ಅಭಿನಂದನ ಪತ್ರ ನೀಡಿ ಸನ್ಮಾನಿಸಲಾಯಿತು, ದೇವಾಲಯದ ಮುಖ್ಯಸ್ಥರಾದ ಲಕ್ಷ್ಮೀಶ್ ರವರು ಅಮ್ಮನವರ ಅನುಗ್ರಹ ಪ್ರಸಾದ ನೀಡಿ ಮುಂದಿನ ದಿನಗಳಲ್ಲಿ ತಾಯಿಯ ಆಶೀರ್ವಾದದಿಂದ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಶುಭ ಹಾರೈಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ. ಡಿ ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಮಟ್ಟದಿಂದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಬೆಳಗಿಸಿದ ಶರತ್ ಇನ್ನೂ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು. ಟ್ರಸ್ಟ್ ಅಧ್ಯಕ್ಷರಾದ ರಂಗಸ್ವಾಮಿ ಸಿ. ಎನ್., ಉಪಾಧ್ಯಕ್ಷರಾದ ನಾಗರತ್ನ, ಕನ್ನಡ ಸಂಘದ ಅಧ್ಯಕ್ಷರಾದ ಸಿ.ಬಿ ರೇಣುಕಾಸ್ವಾಮಿ, ತಿಪಟೂರು ಎ.ಎಸ್.ಐ ಅರುಣ್, ಸೇವಾದಳದ ಕೆಜಿ ಕೃಷ್ಣೆಗೌಡ್ರು, ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿಗಳಾದ ಪ್ರೇಮಾನಂದ, ಜೀರ್ಣೋದ್ದಾರ ಸಮಿತಿಯ ರಂಗರಾಜು, ಬಿಂದು ಶಿವಣ್ಣ, ಕರವೇ ಗುರುಮೂರ್ತಿ, ನೆರಳು ಸಂಘಟನೆಯ ಮೊಹಮ್ಮದ್ ಹುಸೇನ್ ಗುಂಡ, ನಿವೃತ್ತ ಶಿಕ್ಷಕಿ ರತ್ನ ರೇಣುಕಾಸ್ವಾಮಿ, ಮನೋಜ್, ಮಧು, ಸಚಿನ್, ಚಂದ್ರಶೇಖರ ತಿಪ್ಪಯ್ಯನ ಪಾಳ್ಯ, ಸಂಚಾಲಕರಾದ ಮಹೇಶ್ ಸಿ.ಎಂ ಉಪಸ್ಥಿತರಿದ್ದರು.