ತಾಳಿಕೋಟೆ: ಸೈಕಲ್ ತೊಳೆಯಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಳಿಕೋಟೆ ಪಟ್ಟಣದಲ್ಲಿ ಸಂಭವಿಸಿದೆ. ಪಟ್ಟಣದ ಮಿಣಜಗಿ ರಸ್ತೆಯಲ್ಲಿರುವ ಹೊಯ್ಸಳ ಧಾಬಾ ಹಿಂಬದಿಯ ಕಲ್ಲಿನ ಪಡೆಯ ನೀರಿನಲ್ಲಿ ಸೈಕಲ್ ತೊಳೆಯಲು ಹೋದ ಬಾಲಕ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಕಾರ್ತಿಕ್ ಗುರಣ್ಣ ಆಲ್ಯಾಳ (14) ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.
ಬಾಲಕ ಕಾಲು ಜಾರಿ ಬೀಳುವುದನ್ನು ನೋಡಿದ ಬಾಲಕನ ಸ್ನೇಹಿತನೊಬ್ಬ ಪಾಲಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಮುಳಗು ತಜ್ಙರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಮುಳುಗಿಯಾಗಿತ್ತು. ಬಾಲಕನ ಶವವನ್ನು ಈಜು ತಜ್ಞರು ಹೊರಗೆ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ತಾಳಿಕೋಟೆ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.