ಬಾದಾಮಿ: ಶ್ರೀ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆ, ನವಿಲುಗರಿ ಪ್ರಕಾಶನ ಹಾಸನ, ಶ್ರೀ ಎಸ್.ಬಿ. ಮಮದಾಸೂರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಹಳೆ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕ, ಅಂಕಣಕಾರ ಎಲ್.ಪಿ.ಕುಲಕರ್ಣಿಯವರ ಕೃತಿ ’ಯುರೇಕಾ’ ವಿಜ್ಞಾನ ಲೋಕದ ಬೆಳಕಿಂಡಿ ಲೋಕಾರ್ಪಣೆ ಸಮಾರಂಭ ಅಕ್ಟೋಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಬಾದಾಮಿ ಶ್ರೀ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವ ಮಂಟಪದಲ್ಲಿ ನಡೆಯಲಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಸಾಹಿತಿ ಅಂಕಣಕಾರ ರೋಹಿತ್ ಚಕ್ರತೀರ್ಥ ಕೃತಿ ಬಿಡುಗಡೆ ಮಾಡಲಿದ್ದಾರೆ. ಎಸ್.ವಿ.ಪಿ. ಸಂಸ್ಥೆಯ ಚೇರ್ಮನ್ ಎ.ಸಿ.ಪಟ್ಟಣದ ಅಧ್ಯಕ್ಷತೆ ವಹಿಸಲಿದ್ದಾರೆ. ಶಶಿಧರ ಎಸ್. ಮೂಲಿಮಾನಿ ಕೃತಿ ಅವಲೋಕನ ಮಾಡಲಿದ್ದಾರೆ.
ಎಸ್.ಬಿ.ಎಂ. ಪದವಿ ಮಹಾವಿದ್ಯಾಲಯ ಚೇರ್ಮನ್ ಎಸ್.ಜಿ. ಕಾರುಡಗಿಮಠ, ಎಸ್.ವಿ.ಪಿ. ಸಂಸ್ಥೆಯ ನಿರ್ದೇಶಕ ಜೆ.ಎಸ್. ಮಮದಾಪೂರ, ಶ್ರೀ ಸ್ವಾಮಿ ವಿವೇಕಾನಂದ ವಿ.ಸ. ಸಂಸ್ಥೆಯ ಸಂಸ್ಥಾಪಕ ರಮೇಶ್ ಪೂಜಾರ್, ನವಿಲುಗರಿ ಪ್ರಕಾಶನದ ಶ್ರೀನಿವಾಸ್ ಡಿ. ಶೆಟ್ಟಿ, ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜು ಹುಬ್ಬಳ್ಳಿಯ ನಿವೃತ್ತ ಡೀನ್ ಡಾ. ರಮೇಶ್ ಆರ್. ಬುರ್ಬುರೆ, ಪೂರ್ಣಪ್ರಜ್ಞ ಪಿ.ಯು ಕಾಲೇಜು ಬೆಂಗಳೂರು ಪ್ರಾಚಾರ್ಯ ಗುರುರಾಜ್ ಎಸ್. ದಾವಣಗೆರೆ, ಎಸ್.ಎಸ್.ಬಿ.ಎಂ. ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ರವೀಂದ್ರ ಎಸ್. ಮೂಲಿಮಾನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.