ಶಿವಮೊಗ್ಗ, ಜ.5: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನುಷ್ಯತ್ವ ಇದ್ದರೆ ತಡಮಾಡದೆ ಮೃತ ಬಾಣಂತಿಯರ ಕುಟುಂಬಕ್ಕೆ ತಲಾ ರೂ. 25 ಲಕ್ಷ ಪರಿಹಾರ ಘೋಷಿಸಬೇಕು, ಅನಾಥವಾಗಿರುವ ಮಕ್ಕಳನ್ನು ಸರ್ಕಾರ ದತ್ತು ತೆಗೆದುಕೊಳ್ಳಬೇಕು. ಬಾಣಂತಿಯರು, ಹಸುಗೂಸುಗಳಿಗೆ ಸಂಬಂಧಿಸಿದ ಮೋದಿ ಸರ್ಕಾರದ ಮಾತೃವಂದನಾ, ಇಂದ್ರಧನುಷ್ ಸೇರಿ ಅನೇಕ ಯೋಜನೆಗಳು ಸರಿಯಾಗಿ ಜನರನ್ನು ತಲುಪುತ್ತಿಲ್ಲ. ಅವಕ್ಕೂ ಕತ್ತರಿ ಹಾಕಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಬಿಜೆಪಿ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ವಿವಿಧ ಪ್ರಕೋಷ್ಠಕಗಳ ರಾಜ್ಯ ಸಂಚಾಲಕರಾದ ದತ್ತಾತ್ರಿ, ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಗಾಯತ್ರಿ ದೇವಿ, ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾದ ಹೇಮತ್ ಸೇರಿದಂತೆ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.