ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಶಾಸಕಾಂಗ ಸಭೆಯಲ್ಲಿ ಅಧಿಕೃತ ಘೋಷಣೆಯಾಗಿದೆ.
ಇಂದು ದೆಹಲಿಯಿಂದ ಆಗಮಿಸಿದ ವೀಕ್ಷಕರು ಕೋರ್ ಕಮಿಟಿಯಲ್ಲಿ ಬಸವರಾಜ ಬೊಮ್ಮಾಯಿಯವರ ಹೆಸರನ್ನೇ ಸಭೆಯಲ್ಲಿ ಹೇಳಿದ್ದರು. ಯಡಿಯೂರಪ್ಪ ಪರಮಾಪ್ತ ಬೊಮ್ಮಾಯಿ ಆಯ್ಕೆಯಾಗುತ್ತಲೇ ಯಡಿಯೂರಪ್ಪ ತಮ್ಮ ಬ್ರ್ಯಾಂಡ್ ಆಗಿರುವ ‘ವಿಕ್ಟರಿ ಚಿಹ್ನೆ’ ತೋರಿಸಿ ನಗುತ್ತಲೇ ಮಾಧ್ಯಮದವರತ್ತ ಕೈ ಬೀಸಿದರು.
ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿರುವ ಬೊಮ್ಮಾಯಿ, ಹಲವಾರು ನೀರಾವರಿ ಯೋಜನೆಗಳ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ. ಅನುಭವಿ ಮತ್ತು ಶುದ್ಧಹಸ್ತರಾಗಿರುವ ಕಾರಣ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಒಲಿದು ಬಂದಿದೆ.


ಹಾವೇರಿ ಜಿಲ್ಲೆಯ ಶಿಗ್ಗಾಂವ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಬೊಮ್ಮಾಯಿ, ಹಿಂದಿನ ಸಂಪುಟದಲ್ಲಿ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ, ಉಡುಪಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.