Monday, September 23, 2024
Monday, September 23, 2024

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

Date:

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ – 2024ರಲ್ಲಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ಧಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ 04-10-2024 ರಿಂದ 07-10-2024 ರವರೆಗೆ ನಡೆಯುವ ರಾಜ್ಯಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ. ಚಿತ್ರಕಲೆ, ಶಿಲ್ಪಕಲೆ,‌ ಗ್ರಾಫಿಕ್ಸ್ ಕಲೆ, ಛಾಯಚಿತ್ರ, ಅನ್ವಯ ಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳಿರುತ್ತದೆ. ಸಾಂಪ್ರದಾಯಿಕ ಚಿತ್ರಕಲೆ, ಸಾಂಪ್ರದಾಯಿಕ ಶಿಲ್ಪಕಲೆ, ಕರಕುಶಲ ಕಲೆ / ಇನ್ಲೇ ವಿಭಾಗಗಳಲ್ಲಿ ಹವ್ಯಾಸಿ ವಿಭಾಗವಿರುವುದಿಲ್ಲ. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನಗಳನ್ನು ನೀಡಲಾಗುವುದು.

ಕಲಾಕೃತಿಗಳನ್ನು 30-09-2024 ರೊಳಗೆ ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) , ಸಿದ್ಧಾರ್ಥನಗರ, ಮೈಸೂರು – 570011, ಸಂಸ್ಥೆಯ ಕಛೇರಿ ಅವಧಿಯಲ್ಲಿ ಸಲ್ಲಿಸುವುದು. ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು ಸಂಪೂರ್ಣ ವಿವರವನ್ನು ಸ್ವಯಂ ದೃಢೀಕರಣದೊಂದಿಗೆ ಉಪಸಮಿತಿಗೆ ತಲುಪಿಸುವುದು.

ವಿಶೇಷ ಸೂಚನೆ: ಕಲಾಕೃತಿಯು ಅಕ್ಟೋಬರ್‌ 2023ರ ನಂತರ ರಚಿಸಿರಬೇಕು ಹಾಗೂ ಬಹುಮಾನ ಪಡೆದ ಕಲಾಕೃತಿಯಾಗಿರಬಾರದು. ಒಂದು ವಿಭಾಗಕ್ಕೆ ಎರಡು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಕಳುಹಿಸಬಹುದು. ಯಾವುದೇ ಒಂದು ವಿಭಾಗದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಯ್ಕೆಯಾದ ಕಲಾಕೃತಿಯನ್ನು ಮಾತ್ರ ಪ್ರದರ್ಶಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಕಲಾಕೃತಿಯು 1× 1 ಅಡಿಗಿಂತ ಚಿಕ್ಕದು, 3 × 3 ಅಡಿಗಿಂತ ದೊಡ್ಡದು ಇರಬಾರದು. ಶಿಲ್ಪವು 20 ಕೆ.ಜಿ ಗಿಂತ ಕಡಿಮೆ ಭಾರವಾಗಿರಬಾರದು. ಚಿತ್ರಕಲಾಕೃತಿಯನ್ನು ಫ್ರೇಂನೊಂದಿಗೆ ಮತ್ತು ಶಿಲ್ಪಾಕೃತಿಯನ್ನು ಪೀಠದೊಂದಿಗೆ ಕಳುಹಿಸುವುದು. ಶಿಲ್ಪವು ದುರ್ಬಲ (Fragile) ಮಾಧ್ಯಮದಿಂದ ನಿರ್ಮಿತವಾಗಿರಬಾರದು. ಕಲಾಕೃತಿಗಳನ್ನು ಸಮಿತಿಯು ಹಾನಿಗೊಳಗಾಗದಂತೆ ಸಂರಕ್ಷಿಸಲು ಬಯಸುತ್ತದೆ. ಆದಾಗ್ಯೂ ಕೈ ಮೀರಿದ ಪರಿಸ್ಥಿತಿಗೆ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಜವಾಬ್ದಾರಿಯಾಗುವುದಿಲ್ಲ. ಕಲಾ ಪ್ರದರ್ಶನ ಮುಗಿದ ನಂತರ ದಿನಾಂಕ 08-10-2024 ರಿಂದ 14-10-2024 ರೊಳಗೆ ಕಲಾಕೃತಿಗಳನ್ನು ಹಿಂಪಡೆಯುವುದು. ಈ ಅವಧಿಯೊಳಗೆ ಹಿಂಪಡೆಯದ ಕಲಾಕೃತಿಗಳಿಗೆ ಉಪಸಮಿತಿಯು ಹೊಣೆಯಲ್ಲ. ಕಲಾಕೃತಿಯನ್ನು ಸಲ್ಲಿಸುವುದು ಮತ್ತು ಹಿಂದಕ್ಕೆ ಪಡೆಯುವುದು ಕಲಾವಿದರ ಸ್ವಂತ ಜವಾಬ್ದಾರಿ. ಅರ್ಜಿ ನಮೂನೆಯನ್ನು ಈ ಕೆಳಗೆ ನಮೂದಿಸಿರುವ ವೆಬ್‌ ಸೈಟ್‌ ಮೂಲಕ ಪಡೆಯಬಹುದಾಗಿದೆ.
https://cavamysore.karnataka.gov.in & https://mysore.nic.in ಹೆಚ್ಚಿನ ವಿವರಗಳಿಗಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಚಂದ್ರಶೇಖರ ಎ.ಪಿ. ಮೊಬೈಲ್‌ ಸಂಖ್ಯೆ 9844595568 ಮತ್ತು ರವಿಮೂರ್ತಿ ಕೆ ಮೊಬೈಲ್‌ ಸಂಖ್ಯೆ 9844082579 ರವರನ್ನು ಸಂಪರ್ಕಿಸಬಹುದಾಗಿರುತ್ತದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ಸಡಿಲಿಕೆಗೆ ಮನವಿ

ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್...

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...

ಬಾಸ್ಕೆಟ್ ಬಾಲ್: ಎಂ.ಜಿ.ಎಂ ಕಾಲೇಜು ಪ್ರಥಮ; ಕಾರ್ಕಳ ಜ್ಞಾನಸುಧಾ ಮತ್ತು ನಿಟ್ಟೆ ಕಾಲೇಜು ದ್ವಿತೀಯ

ಕಾರ್ಕಳ, ಸೆ.22: ಬಾಸ್ಕೆಟ್‌ಬಾಲ್ ಕ್ರೀಡೆಯು ಯುವಮನಸ್ಸುಗಳನ್ನು ಸೆಳೆಯುತ್ತಿದೆ. ಬಾಸ್ಕೆಟ್‌ಬಾಲ್ ಬಾಕ್ಸ್ನಂತೆ ಕ್ರೀಡಾಳುಗಳ...
error: Content is protected !!