ಜೂನ್ 28ರಿಂದ ರಾಜ್ಯಾದ್ಯಂತ ಕಲ್ಯಾಣ ಮಂಟಪ, ಹೊಟೇಲ್, ರೆಸಾರ್ಟ್, ಸಭಾಂಗಣ, ಚೌಲ್ಟ್ರಿಗಳಲ್ಲಿ 40 ಮಂದಿ ಮೀರದಂತೆ ಮದುವೆ ಆಯೋಜಿಸಬಹುದು ಎಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಪರಿಷ್ಕೃತ ನಿಯಮಗಳೇನು?
1. ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ಆಯೋಜಿಸುವ ಮೊದಲು ಸ್ಥಳೀಯಾಡಳಿತದ (ಬಿಬಿಎಂಪಿ ಆಯುಕ್ತ/ ಆಯಾ ತಾಲ್ಲೂಕಿನ ತಹಶೀಲ್ದಾರರ) ಅನುಮತಿ ಪಡೆದಿರಬೇಕು.
2. ಸಂಬಂಧಪಟ್ಟ ಅಧಿಕಾರಿ 40 ಮಂದಿಗೆ ಮಾತ್ರ ಪಾಸ್ ನೀಡುತ್ತಾರೆ.
3. ಪಾಸ್ ಇರುವವರಿಗೆ ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶ.
4. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಮದುವೆ ಸಮಾರಂಭಗಳಲ್ಲಿ ಭಾಗವಹಿಸಬೇಕು.
ಮೇಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮದುವೆ ಆಯೋಜಿಸುವವರ ಜೊತೆಗೆ ಕಲ್ಯಾಣ ಮಂಟಪ/ಹೊಟೇಲ್/ರೆಸಾರ್ಟ್ ಇತ್ಯಾದಿ ಮದುವೆ ನಡೆಯುವ ಸ್ಥಳದ ಮಾಲಕರ ಮೇಲೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020, ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.