Sunday, January 19, 2025
Sunday, January 19, 2025

ಪಡುಕರೆ- ಯುವ ಸಪ್ತಾಹ

ಪಡುಕರೆ- ಯುವ ಸಪ್ತಾಹ

Date:

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿಯ ಪ್ರಯುಕ್ತ ಯುವ ಸಪ್ತಾಹವನ್ನು ಪ್ರಾಂಶುಪಾಲರು ಉದ್ಘಾಟಿಸಿದರು.

ಇದರ ಭಾಗವಾಗಿ ವಿಶೇಷ ಉಪನ್ಯಾಸವನ್ನು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್.ಎನ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿವೇಕಾನಂದರು ಮೌಡ್ಯಗಳಿಂದ ಮುಕ್ತವಾದ ಸುಧಾರಿತ ಹಿಂದೂ ಧರ್ಮವನ್ನು ಪ್ರತಿಪಾದಿಸಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಯ ಭಾರತ, ವಿಶ್ವಭ್ರಾತೃತ್ವ ಮತ್ತು ಮಾನವತೆಯನ್ನು ಜಗತ್ತಿಗೆ ಹರಡುವಲ್ಲಿ ಮಾದರಿಯಾಗಬೇಕೆಂದು ಬಯಸಿದ್ದರು.

ಸ್ತ್ರೀ ಪುರುಷ ಸಮಾನತೆಯ, ನಿರ್ಗತಿಕರನ್ನು ಮೇಲೆತ್ತುವ, ಯುವಶಕ್ತಿಯನ್ನು ಜಾಗೃತಗೊಳಿಸುವ, ವೈಜ್ಞಾನಿಕ- ವೈಚಾರಿಕತೆಯ ಹಾಗೂ ಸಾಮರಸ್ಯ-ಸಹಿಷ್ಣುತೆಯ ಅದರ ವೇದಾಂತ ತತ್ವಗಳು, ಪ್ರಾಚೀನ-ಆಧುನಿಕತೆಯ, ವಿಜ್ಞಾನ- ಆಧ್ಯಾತ್ಮಿಕ, ಪಾಶ್ಚಿಮಾತ್ಯ-ಪೌರತ್ವಗಳ ಧರ್ಮ ಮತ್ತು ವ್ಯವಹಾರಗಳ ಸಂಗಮ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ. ವಿ ಗಾಂವ್ಕರ್ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ನಾಗರಾಜ ವೈದ್ಯ, ಐಕ್ಯೂಎಸಿ ಸಂಚಾಲಕರಾದ ರವಿಪ್ರಸಾದ್ ಕೆ.ಜಿ, ರಾಷ್ಟ್ರ‍ೀಯ ಸೇವಾ ಯೋಜನೆಯ ಘಟಕ-1ರ ಅಧಿಕಾರಿಯಾದ ಡಾ. ಮುರುಳಿ ಎನ್ ಉಪಸ್ಥಿತರಿದ್ದರು.

ರಾಷ್ಟ್ರ‍ೀಯ ಸೇವಾ ಯೋಜನೆಯ ಘಟಕ-2ರ ಅಧಿಕಾರಿ ಅನಂತ್.ಸಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್.ಎಸ್. ಸ್ವಯಂಸೇವಕರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!