ಮಂಗಳೂರು, ಜೂ.23: ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗ ನಿತ್ಯ ಅಭ್ಯಾಸದ ಮೂಲಕ ಜೀವನದ ಭಾಗವಾಗಬೇಕು ಎಂದು ಹೇಳಿದರು. ದೈಹಿಕ ಶಿಕ್ಷಣ ನಿರ್ದೇಶಕಿ, ಡಾ. ಅಪರ್ಣ ಆಳ್ವ ಅವರು ಯೋಗ ತರಬೇತಿಯನ್ನು ನೀಡಿದರು. ಸ್ನಾತಕ ವಿಭಾಗದ ಸಂಯೋಜಕರು, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವಸಂತಿ ಪಿ., ಐಕ್ಯೂಎಸಿಯ ಸಹ-ಸಂಯೋಜಕರಾದ ಡಾ. ಜ್ಯೋತಿಪ್ರಿಯಾ, ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಲೋಕೆಶ್‌ನಾಥ್, ಡಾ. ಮೋಹನ್‌ದಾಸ್, ಸ್ವಯಂ ಸೇವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಶಾಂತಿ ಕಾರ್ಯಕ್ರಮ ನಿರೂಪಿಸಿದರು.
ಯೋಗ ನಿತ್ಯ ಅಭ್ಯಾಸದ ಮೂಲಕ ಜೀವನದ ಭಾಗವಾಗಬೇಕು: ಡಾ. ಜಯಕರ ಭಂಡಾರಿ

ಯೋಗ ನಿತ್ಯ ಅಭ್ಯಾಸದ ಮೂಲಕ ಜೀವನದ ಭಾಗವಾಗಬೇಕು: ಡಾ. ಜಯಕರ ಭಂಡಾರಿ
Date: