ಅಂಚೆ ಇಲಾಖೆಯು ವಿಶ್ವಯೋಗ ದಿನದ ಅಂಗವಾಗಿ ಜೂನ್ 21ರ ಯೋಗದಿನವನ್ನು“ಮನೆಯಲ್ಲಿರಿ ಯೋಗದೊಂದಿಗೆ ಇರಿ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶೇಷ ರೀತಿಯ ಅಂಚೆ ಚೀಟಿ ರದ್ದತಿ (ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್) ನ್ನು ದೇಶದ 810 ಅಂಚೆ ಕಛೇರಿಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಉಡುಪಿ ಪ್ರಧಾನ ಅಂಚೆ ಕಛೇರಿ, ಮಣಿಪಾಲ ಪ್ರಧಾನ ಅಂಚೆ ಕಛೇರಿ, ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ಈ ಅಂಚೆ ಚೀಟಿಯು ಲಭ್ಯವಿರುತ್ತದೆ. ಆಸಕ್ತರು ಜೂನ್ 21ರಂದು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಅಂಚೆ ವಿಭಾಗದ ಅಧೀಕ್ಷಕ ನವೀನ್ ಚಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಯೋಗ ದಿನ: ವಿಶೇಷ ಅಂಚೆ ಚೀಟಿ ಬಿಡುಗಡೆ

ವಿಶ್ವ ಯೋಗ ದಿನ: ವಿಶೇಷ ಅಂಚೆ ಚೀಟಿ ಬಿಡುಗಡೆ
Date: