ಕಾರ್ಕಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ.), ಶ್ರೀ ಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಕಾರ್ಕಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾಣೂರು ವಲಯದ ಸಾಣೂರು ಕಾರ್ಯ ಕ್ಷೇತ್ರದಲ್ಲಿ ಯೋಗೋತ್ಸವ 38ನೇ ಯೋಗಾಸನ ಪ್ರಾಣಾಯಾಮ ಧ್ಯಾನ ಬೇಸಿಗೆ ಶಿಬಿರ ಸಾಣೂರು ಗ್ರಾಮ ಪಂಚಾಯತ್ ಸುವರ್ಣ ಗ್ರಾಮೋದಯ ಸೌಧದಲ್ಲಿ ಉದ್ಘಾಟನೆಗೊಂಡಿತು.
ಶಿಬಿರವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಮಾತನಾಡಿ, ಯೋಗ ಮಾಡುವುದರಿಂದ ರೋಗ ಬರದಂತೆ ತಡೆಗಟ್ಟಬಹುದು ಮತ್ತು ದೇಹ ಮತ್ತು ಮನಸ್ಸು ಸದೃಢವಾಗಲು ಯೋಗ ಸಹಕಾರಿಯಾಗಲಿದೆ. ಸರ್ವ ರೋಗಕ್ಕೂ ಯೋಗ ಮದ್ದು ಎಂದರು.
ಯೋಗ ಗುರುಗಳಾದ ಬಾಲಕೃಷ್ಣ ರೇ ಖ್ಯಾ ಮಾಹಿತಿ ನೀಡಿದರು. ಸಾಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸತ್ಯಾರ್ಥಿ ರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಪುಷ್ಪಲತಾ ರಾವ್ ಪ್ರಾರ್ಥಿಸಿ, ಸೇವಾ ಪ್ರತಿನಿಧಿ ಅರುಣಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಜಾತಾ ಶೆಟ್ಟಿ ವಂದನಾರ್ಪಣೆಗೈದರು. ಮೋಹನ್ ಶೆಟ್ಟಿ ಸಾಣೂರು ಕಾರ್ಯಕ್ರಮ ನಿರೂಪಿಸಿದರು.