Sunday, January 19, 2025
Sunday, January 19, 2025

ವಿಶ್ವ ಸಾರಸ್ವತ್ ಸಂಗಮಕ್ಕೆ ಮಂಗಳೂರಿನಲ್ಲಿ ಕಾಶೀಮಠಾಧೀಶರಿಂದ ಚಾಲನೆ; ಸಾರಸ್ವತ್ ಅವೇಕ್ನಿಂಗ್ ಪುಸ್ತಕ ಬಿಡುಗಡೆ

ವಿಶ್ವ ಸಾರಸ್ವತ್ ಸಂಗಮಕ್ಕೆ ಮಂಗಳೂರಿನಲ್ಲಿ ಕಾಶೀಮಠಾಧೀಶರಿಂದ ಚಾಲನೆ; ಸಾರಸ್ವತ್ ಅವೇಕ್ನಿಂಗ್ ಪುಸ್ತಕ ಬಿಡುಗಡೆ

Date:

ಮಂಗಳೂರು: ವಿಶ್ವಾದ್ಯಂತ ಇರುವ ಸಾರಸ್ವತ ಸಮುದಾಯದ ಸಮ್ಮೇಳನ “ವಿಶ್ವ ಸಾರಸ್ವತ ಸಂಗಮ” ಇಂದು ಮಂಗಳೂರಿನ ಕೊಂಚಾಡಿಯಲ್ಲಿರುವ ವನಿತಾ ಅಚ್ಯುತ್ ಪೈ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕಾಶೀಮಠಾಧೀಶರಾದ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರ ಕಾಶ್ಮೀರ ಭೇಟಿಯ ಸಮಗ್ರ ಮಾಹಿತಿಗಳನ್ನು ಒಳಗೊಂಡ “ಸಾರಸ್ವತ್ ಅವೇಕ್ನಿಂಗ್” ಪುಸ್ತಕದ ಪ್ರಥಮ ಪ್ರತಿಯನ್ನು ಶ್ರೀಗಳು ಪದ್ಮಶ್ರೀ ಪುರಸ್ಕೃತ ಡಾ. ಕಾಶೀನಾಥ ಪಂಡಿತ್ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಡಾ.ಕಾಶೀನಾಥ ಪಂಡಿತ್ ಅವರು, ಕಾಶ್ಮೀರ ಮತ್ತು ಕಾಶ್ಮೀರಿ ಪಂಡಿತರ ಮಹತ್ವದ ಬಗ್ಗೆ ವಿಚಾರ ಮಂಡಿಸಿದರು.

ಬಳಿಕ ಮಾತನಾಡಿದ ಡಾ. ಅಜಯ್ ಚುರುಂಗುಂ ಅವರು, ಕಾಶ್ಮೀರದಿಂದ ಸಾರಸ್ವತರ ನಿರ್ಗಮನ – ಕಲಿಯಬೇಕಾದ ಪಾಠ ವಿಷಯದ ಮೇಲೆ ಮಾತನಾಡಿ ಕಾಶ್ಮೀರಿ ಪಂಡಿತರ ಮೇಲೆ ಆಗಿರುವ ನರಮೇಧ ಮತ್ತು ಮತಾಂಧರಿಂದ ಮತಾಂತರದ ದೌರ್ಜನ್ಯ ಮತ್ತು ರಾಜಕೀಯದ ಆಯಾಮದ ಬಗ್ಗೆ ವಿಚಾರ ಮಂಡಿಸಿದರು.

ಆರತಿ ಟಿಕ್ಕೂ ಅವರು ಸ್ಥಳಾಂತರಿಸಲಾದ ಕಾಶ್ಮೀರಿ ಹಿಂದೂಗಳ ಅಸ್ಮಿತೆ ಬಗ್ಗೆ ಮಾತನಾಡಿ ಕಾಶ್ಮೀರಿ ಪಂಡಿತರಾಗಿದ್ದ ತಮ್ಮ ವಂಶಸ್ಥರ ಮೇಲೆ ಆದ ದಾಳಿ, ಆಸ್ತಿಪಾಸ್ತಿ ನಾಶದ ಬಗ್ಗೆ ಹೇಳಿದರು.

ಶೆಫಾಲಿ ವೈದ್ಯ ಅವರು ರಾಷ್ಟ್ರ ನಿರ್ಮಾಣದಲ್ಲಿ ಸಾರಸ್ವತರ ಪಾತ್ರದ ಬಗ್ಗೆ ಮಾತನಾಡಿ, 1510ರಲ್ಲಿ ಪೋರ್ಚುಗೀಸರು ಗೋವಾದಲ್ಲಿ ಸಾರಸ್ವತರ ಮತಾಂತರ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಒಪ್ಪದೇ ಇದ್ದವರನ್ನು ಗೋವಾ ಬಿಟ್ಟು ಹೋಗಲು ಸೂಚಿಸಲಾಗುತ್ತಿತ್ತು. ಎರಡೂ ಒಪ್ಪದವರನ್ನು ಹತ್ಯೆ ಮಾಡಲಾಗುತ್ತಿತ್ತು. ಅದನ್ನೇ 1990 ರಲ್ಲಿ ಮತಾಂಧರು ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಮಾಡಲಾಯಿತು ಎಂದು ಹೇಳಿದರು.

ಉದ್ಯಮಿ ಪ್ರದೀಪ್ ಪೈ, ಜಿ.ಎಸ್.ಬಿ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಕಾಮತ್, ಶಾಸಕರಾದ ವೇದವ್ಯಾಸ ಕಾಮತ್ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!