ಉಡುಪಿ: ಭವಾನಿ ಕ್ರಿಯೇಷನ್ಸ್ ಅರ್ಪಿಸುವ, ವಿಶ್ವ ಗುರು ಭಾರತ ಹೊಸ ದೇಶಭಕ್ತಿ ಗೀತೆ ದಿನಾಂಕ 15.8.2022 ರಂದು ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಲಿದೆ.
“ಪಯಣಿಸುವ ನಾವು ಪಯಣಿಸುವ” ಎಂಬ ಭಾವಗೀತೆಯ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿರುವ ತುಷಾರ್ ಕೆ ಕೋಟೆಕಾರ್ ಅವರು ಈ ಗೀತೆಗೆ ಮತ್ತೆ ಅಕ್ಷರ ಪೋಣಿಸಿದ್ದಾರೆ.
“ಸೂತಕ” ಎಂಬ ತುಳು ಆಲ್ಬಂ ಸಾಂಗ್ ಮೂಲಕ ಮೊದಲ ಬಾರಿಗೆ ಸಾಹಿತ್ಯದಲ್ಲಿ ಮಿಂಚಿದ ಧೀರಜ್ ಕುಮಾರ್ ಉಳ್ಳಾಲ್ ಇವರು ಈ ಬಾರಿ ರಾಗ ಸಂಯೋಜನೆಯ ಪ್ರಯತ್ನ ಮಾಡಿ ಹಾಡಿಗೆ ದನಿಯನ್ನು ನೀಡಿದ್ದಾರೆ.
ಚಿದಾನಂದ ಕಡಬ ಅವರ ಅಮೋಘ ಸಂಗೀತದಲ್ಲಿ ಕೇಳುಗರ ಕಿವಿಗೆ ದೇಶಪ್ರೇಮದ ಕಿಚ್ಚು ಹಚ್ಚಲು ಪ್ರಯತ್ನಿಸಿದ್ದಾರೆ.
‘ವಿಶ್ವ ಗುರು ಭಾರತ’ ಹೊಸ ದೇಶ ಭಕ್ತಿ ಗೀತೆಯ ಪೋಸ್ಟರನ್ನು ಬಿ. ಗೋಪಿನಾಥ್ ಬಾಳಿಗ ಅವರು ವಿನ್ಯಾಸಗೊಳಿಸಿದ್ದು, ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರವರು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.
ಜೊತೆಗೆ ಎ.ಎಸ್.ಐ. ಸುಬ್ರಾಯ ಕಲ್ಪನೆ ಅವರ ಭಿನ್ನ ಗಾಯನವನ್ನು ಈ ಗೀತೆಯಲ್ಲಿ ಕೇಳಬಹುದು.
ವಿಶೇಷವೆಂದರೆ ಇವರೊಂದಿಗೆ ವಿದ್ಯಾರ್ಥಿಗಳಾದ ಎ. ದೀಕ್ಷಾ, ಸೌಂದರ್ಯ ಹರೇಕಳ, ತ್ರಿಷಾ ಆರ್. ಬಿ ಉದ್ಯಾವರ, ಕಾರ್ತಿಕ್, ಪವನ್ ರಾಜ್ ಆರ್., ವರ್ಷ ಕೆ.ಎನ್., ಜೀವಿತ್ ರಾಜ್, ಎಂ ಜಿ.ವಿನೀತ, ಪರ್ಶಿನಿ, ಶರಣ್ ಪಿ ಮುಂತಾದವರು ಗೀತೆಗೆ ದನಿಗೂಡಿಸಿದ್ದಾರೆ.
ಸಂತೋಷ್ ಪುಚ್ಚೇರ್ ರವರು ವಿಡಿಯೋ ಸಂಕಲನವನ್ನು ಮಾಡಿದ್ದಾರೆ.
ಆಗಸ್ಟ್ 15 ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಈ ಗೀತೆಯು ಯೂಟ್ಯೂಬ್ (Thushar k Kotekar) ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ಹೊಸ ತಂಡವನ್ನು ಹುರಿದುಂಬಿಸಿ ಸಹಕರಿಸಬೇಕು ಎಂಬುದು ವಿಶ್ವ ಗುರು ಭಾರತ ತಂಡದ ಆಶಯ.