ಮಲ್ಪೆ: 25 ವರ್ಷಗಳನ್ನು ಪೂರೈಸುತ್ತಿರುವ ಬ್ರಾಹ್ಮಣ ಮಹಾಸಭಾ ಕೊಡವೂರು, ರಜತೋತ್ಸವದ ಸವಿನೆನಪಿಗಾಗಿ ಹಾಗೂ ಶಾಶ್ವತ ಕಾರ್ಯಕ್ರಮವಾಗಿ ತನ್ನ ಸ್ವಂತ ಕಟ್ಟಡ “ವಿಪ್ರಶ್ರೀ ಸಾಂಸ್ಕೃತಿಕ ಕಲಾಭವನದ” ವಿಸ್ತರಣೆ ಹಾಗೂ ನವೀಕರಣದ ಯೋಜನೆಯನ್ನು ಹಾಕಿಕೊಂಡಿದ್ದು, ಕಾಮಗಾರಿಯ ಚಾಲನೆಯ ಪ್ರಯುಕ್ತ ವೇದಮೂರ್ತಿ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿತು.
ಮುಖ್ಯ ಅತಿಥಿಯಾಗಿ ಅಗಮಿಸಿದ ಮಾಧವ ಐತಾಳ್ ಉಡುಪಿ ಇವರು ಕಾಮಗಾರಿಗೆ ಸಾಂಕೇತಿಕವಾಗಿ ಚಾಲನೆ ನೀಡಿ ಕಾಮಗಾರಿ ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಕಟ್ಟಡ ಕಾಮಗಾರಿಯ ಜವಾಬ್ದಾರಿ ವಹಿಸಿದ ಇಂಜಿನಿಯರ್ ಶ್ರೀಧರ ಆಚಾರ್ಯರಿಗೆ ಕಾಮಗಾರಿ ನಡೆಸಲು ಸಾಂಕೇತಿಕವಾಗಿ ಮುಂಗಡ ಪಾವತಿ ಮಾಡಿ ಕಾಮಗಾರಿ ಪ್ರಾರಂಭಿಸಲು ಕೇಳಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯ, ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀಶ ಭಟ್ ಹಾಗೂ ವಿಜಯ ಕೊಡವೂರು ಶುಭ ಹಾರೈಸಿ, ಕಟ್ಟಡ ವಿಸ್ತರಣೆಗೆ ತಮ್ಮ ಸಹಕಾರ ಸದಾ ಇದೆ ಎಂದು ಆಶ್ವಾಸನೆ ನೀಡಿದರು.
ರಜತೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಟ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್, ಕಾರ್ಯದರ್ಶಿಗಳಾದ ಅನಂತ ಭಟ್, ಶ್ರೀನಿವಾಸ ಬಾಯರಿ ಹಾಗೂ ಮುರಳೀಧರ್, ಕೋಶಾಧಿಕಾರಿ ಶ್ರೀಧರ ಶರ್ಮ ಹಾಗೂ ಇನ್ನಿತರ ಪದಾಧಿಕಾರಿಗಳಾದ ರಮಾಧವ ಶರ್ಮ. ಲಕ್ಷ್ಮೀನಾರಾಯಣ ಭಟ್, ಶ್ರೀನಿವಾಸ ಉಪಾಧ್ಯ, ಗೋವಿಂದ ಐತಾಳ್, ಪ್ರಸಾದ್ ಭಟ್, ಶಾಂತಾರಾಮ್ ಭಟ್, ಪ್ರಸನ್ನ ಕೊಡವೂರು, ಉಮೇಶ್ ರಾವ್, ಕಿರಣ್ ರಾವ್, ಮಾಧವ ಭಟ್ ಮುಂತಾದವರು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಸುಧೀರ್ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.