Friday, September 20, 2024
Friday, September 20, 2024

ಮಣಿಪಾಲ ಸಮೂಹ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಲಭ್ಯ

ಮಣಿಪಾಲ ಸಮೂಹ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಲಭ್ಯ

Date:

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ, ಡಾ. ಟಿ ಎಮ್ ಎ ಪೈ ಆಸ್ಪತ್ರೆ, ಉಡುಪಿ ಮತ್ತು ಡಾ. ಟಿ ಎಮ್ ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಕೋವಿಡ್ ಲಸಿಕೆಯು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರುತ್ತದೆ.  ಮೊದಲ ಡೋಸ್ ಮತ್ತು ಮೊದಲ ಡೋಸ್ ಪಡೆದು 84 ದಿನ ಕಳೆದವರಿಗೆ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿರುತ್ತದೆ. ಸರಕಾರ ನಿಗದಿಪಡಿಸಿದ ದರದಲ್ಲಿ ಲಸಿಕೆ ನೀಡುತ್ತಿದ್ದು ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಆಸ್ಪತ್ರೆಗಳ ಪ್ರಕಟಣೆ ತಿಳಿಸಿದೆ.

ಅವಶ್ಯವಿದ್ದವರು ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿ ಅಥವಾ ನೇರವಾಗಿ ಆಧಾರ್ ಕಾರ್ಡ್ ನೊಂದಿಗೆ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಬರಲು ಕೋರಲಾಗಿದೆ.  ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ  ಕೌಂಟರ್ ನ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
1. ಕಸ್ತೂರ್ಬಾ ಆಸ್ಪತೆ,  ಮಣಿಪಾಲ: 0820  2922761
2. ಡಾ. ಟಿ ಎಂ ಎ ಪೈ ಆಸ್ಪತೆ, ಉಡುಪಿ :0820 2942126
3. ಡಾ. ಟಿ ಎಂ ಎ ರೋಟರಿ ಪೈ ಆಸ್ಪತೆ, ಕಾರ್ಕಳ :0825 8230583

ನಾವು ಆನ್‌ಸೈಟ್ ವ್ಯಾಕ್ಸಿನೇಷನ್ ಅಂದರೆ ನಿಮ್ಮ ಸ್ಥಳಕ್ಕೆ ಬಂದು ಲಸಿಕಾ ಕಾರ್ಯಕ್ರಮ ಕೂಡ ಮಾಡುತ್ತಿದ್ದೇವೆ, ಇದರ ಕುರಿತು  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7338625909 ಗೆ ಕರೆ ಮಾಡಬಹುದು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ. ಅವಿನಾಶ ಶೆಟ್ಟಿ, ಉಡುಪಿ ಡಾ ಟಿ.ಎಮ್.ಎ ಪೈ ಆಸ್ಪತ್ರೆಯ ಡಾ. ಶಶಿಕಿರಣ್  ಉಮಾಕಾಂತ್, ಕಾರ್ಕಳ ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತೆಯ ಡಾ. ಕೀರ್ತಿನಾಥ ಬಲ್ಲಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!