ಉಡುಪಿ ಜಿಲ್ಲಾ ವರ್ತಕರ ಸಂಘದ ನಿಯೋಗವು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮತ್ತು ಶಾಸಕ ಕೆ. ರಘುಪತಿ ಭಟ್ ಅವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಎಲ್ಲಾ ಬಗೆಯ ಅಂಗಡಿಗಳನ್ನು ತೆರೆದು ವ್ಯವಹಾರ ನಡೆಸಲು ಅನುಮತಿ ನೀಡುವಂತೆ ವಿನಂತಿಸಲಾಯಿತು.
ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ, ಹರ್ಶವರ್ಧನ, ಪ್ರಕಾಶ್ ಉಪಾಧ್ಯಾಯ, ಅಬ್ದುಲ್ಲಾ, ಸಂಘದ ಉಪಾಧ್ಯಕ್ಷ ವಸಂತ ಭಟ್, ಕಾರ್ಯದರ್ಶಿ ನಾಗರಾಜ್ ಪಾದೆಮಠ, ವಿಶ್ವನಾಥ್ ಗಂಗೊಳ್ಳಿ, ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.