ಉಡುಪಿಯ ನ್ಯಾಯವಾದಿ ಸುಹಾನ್ ಸಾಸ್ತಾನ್ ನೇತೃತ್ವದ ತಂಡ ಸಿದ್ಧಿ ಜನಾಂಗದ ಕುರಿತು ಅಧ್ಯಯನ ನಡೆಸುವ ಸಲುವಾಗಿ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ಧಿಯವರನ್ನು ಸೋಮವಾರ ಯಲ್ಲಾಪುರದ ಕಛೇರಿಯಲ್ಲಿ ಭೇಟಿಯಾಗಿ ಸಿದ್ಧಿ ಜನಾಂಗದ ಅಭಿವೃದ್ಧಿಯ ಕುರಿತು ಸುಮಾರು ಎರಡು ಗಂಟೆಗಳ ಕಾಲ ಶಾಸಕರೊಂದಿಗೆ ಚರ್ಚಿಸಲಾಯಿತು.
ಸಿದ್ಧಿ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಡೆಸಲಾದ ಪ್ರಯತ್ನಗಳು, ದಾರಿ ಮಧ್ಯದಲ್ಲಿರುವ ಸವಾಲುಗಳು ಸೇರಿದಂತೆ ಸಂಬಂಧಿತ ವಿಚಾರಗಳ ಕುರಿತು ಶಾಸಕ ಶಾಂತಾರಾಮ ಸಿದ್ಧಿ ವಿಸ್ತ್ರತ ಮಾಹಿತಿ ನೀಡಿ ತಂಡದೊಂದಿಗೆ ಸಮುದಾಯದ ಕೆಲವು ಮನೆಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು.
ನ್ಯಾಯವಾದಿ ಸುಹಾನ್ ಸಾಸ್ತಾನ್, ನವೀನ್ ಶೆಟ್ಟಿಬೆಟ್ಟು, ವಿಜಯ್ ಭಟ್ ಕಡೆಕಾರ್, ಧನಂಜಯ್ ಹೊನ್ನಾವರ, ಸಂತೋಷ್ ಹಿರಿಯಡ್ಕ ಉಪಸ್ಥಿತರಿದ್ದರು.