ಉಡುಪಿ: ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿದ್ದು ಕಟಾವು ಕಾರ್ಯ ಮುಕ್ತಾಯ ಹಂತದಲ್ಲಿದೆ, ಕಟಾವು ಮಾಡಲಾದ ಭತ್ತವನ್ನು ಅಕ್ಕಿ ಮಾಡುವ ಪ್ರಕ್ರಿಯೆ ಧಾನ್ಯಲಕ್ಷ್ಮಿ ರೈಸ್ ಮಿಲ್ ನಲ್ಲಿ ನಡೆಯುತ್ತಿದೆ.
ಹಡಿಲು ಭೂಮಿ ಕೃಷಿಯಲ್ಲಿ ಉತ್ಪಾದಿಸಿದ ಸಂಪೂರ್ಣ ಸಾವಯವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ” ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದೆ.
ಶಾಸಕ ಕೆ. ರಘುಪತಿ ಭಟ್ ಅವರು ಮಿಲ್ ಗೆ ಭೇಟಿ ನೀಡಿ ಮಾಲಕರೊಂದಿಗೆ ಚರ್ಚಿಸಿದರು.
ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ಕೆ. ರಾಘವೇಂದ್ರ ಕಿಣಿ, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.