ಉಡುಪಿ ಜಿಲ್ಲೆಯಲ್ಲಿ 82 ಮಂದಿಗೆ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕು-38, ಕುಂದಾಪುರ-14, ಕಾರ್ಕಳ-28 ಮತ್ತು ಹೊರ ಜಿಲ್ಲೆಯ ಇಬ್ಬರು ಸೋಂಕಿಗೆ ಒಳಗಾಗಿದ್ದಾರೆ. 98 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 65018 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 879 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 393 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಜೂನ್ 28 ರಂದು 2405 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 680856 ಮಂದಿಯನ್ನು ಪರೀಕ್ಷಿಸಲಾಗಿದೆ.
ಉಡುಪಿ ಹೋಬಳಿಯ ಫ್ಲೈಯಿಂಗ್ ಸ್ಕ್ವಾಡ್ ಬದಲಾವಣೆ:
ಸರ್ಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಉಡುಪಿ ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಕಿದಿಯೂರು, ಅಂಬಲಪಾಡಿ, ಮೂಡನಿಡಂಬೂರು, (ನಗರಸಭಾ ವ್ಯಾಪ್ತಿ ಹೊರತುಪಡಿಸಿ) ತೆಂಕನಿಡಿಯೂರು, ಕೆಳಾರ್ಕಳಬೆಟ್ಟು, ಬಡಾನಿಡಿಯೂರು, ಮೂಡುತೋನ್ಸೆ, ಪಡುತೋನ್ಸೆ ವ್ಯಾಪ್ತಿಗೆ ನೇಮಿಸಲಾದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜಿ.ಎಂ. ಶಿವಕುಮಾರ್ ಇವರನ್ನು ಬದಲಾವಣೆ ಮಾಡಿ, ನಗರದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಮೊ.ನಂ: 9731860832 ರನ್ನು ನೇಮಕ ಮಾಡಿ, ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.