ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಇಲ್ಲಿನ ಐಕ್ಯೂಎಸಿ ಆಶ್ರಯದಲ್ಲಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನಿಂದ ಬೆಂಗಳೂರಿನ ಉನ್ನತಿ ಫೌಂಡೇಶನ್ ಇವರಿಂದ ಜೀವನ ಕೌಶಲ್ಯ ಮತ್ತು ವೃತ್ತಿ ಕೌಶಲ್ಯ 165 ಗಂಟೆಗಳ ತರಬೇತಿಯ ಸರ್ಟಿಫಿಕೇಟ್ ಕೋರ್ಸ್ ಇದರ ಸಮಾರೋಪ ಸಮಾರಂಭ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉನ್ನತಿ ಫೌಂಡೇಶನ್‌ನ ತರಬೇತುದಾರರಾದ ಶಿಲ್ಪಾ ಭಟ್ ತರಬೇತಿಯಲ್ಲಿ ಪಡೆದುಕೊಳ್ಳಲಾದ ಕೌಶಲಗಳನ್ನು ಯಾವ ರೀತಿಯಲ್ಲಿ ಮುಂದೆ ಉದ್ಯೋಗ ಪಡೆದುಕೊಳ್ಳಲು ಬಳಸಿಕೊಳ್ಳಬಹುದು
ಹಾಗೂ ಜೀವನದಲ್ಲಿ ಯಶಸ್ವಿಯಾಗಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕರ್, ಇಂತಹ ತರಬೇತಿಗಳು ವಿದ್ಯಾರ್ಥಿಗಳನ್ನು ಆಧುನಿಕ ಜಗತ್ತಿನ ಅವಶ್ಯಕತೆಗಳಿಗನುಗುಣವಾಗಿ ಬದಲಾಯಿಸಬಲ್ಲದು ಎಂಬುದನ್ನು ವಿವರಿಸಿದರು. ಕೋರ್ಸ್ ಸಂಚಾಲಕರಾದ ಪ್ರಶಾಂತ್ ನೀಲಾವರ ಸರ್ಟಿಫಿಕೇಟ್ ಕೋರ್ಸ್ನಲ್ಲಿ ನೀಡಲಾದ ತರಬೇತಿಯ ವಿವರವನ್ನು ತೆರೆದಿಟ್ಟರು.
ತರಬೇತಿಯಲ್ಲಿ ವೃತ್ತಿ ಕೌಶಲ್ಯ, ಕಾರ್ಪೊರೇಟ್ ಸ್ಕಿಲ್ಸ್, ಸಂವಹನ ಕಲೆ, ರೆಸ್ಯೂಮ್ ರೈಟಿಂಗ್, ಸಂದರ್ಶನ ಕಲೆ, ಗ್ರೂಪ್ ಡಿಸ್ಕಶನ್, ಮನೋಸಾಮರ್ಥ್ಯ ಇತ್ಯಾದಿ ವಿಷಯಗಳನ್ನೊಳಗೊಂಡ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ತಸ್ಕಿನಾ, ನಿತಿಶ್ ಹಾಗೂ ತೃಪ್ತಿ ಅನುಭವ ಹಂಚಿಕೊಂಡರು. ಅಂತಿಮ ಬಿಕಾಂ ಸುಜನ್ಯ ಸ್ವಾಗತಿಸಿ, ಅಂತಿಮ ಬಿ.ಎಸ್.ಡಬ್ಲ್ಯೂ ಶ್ವೇತಾ ವಂದನಾರ್ಪಣೆಗೈದರು. ಅಂತಿಮ ಬಿಕಾಂ ಸಿಂಧೂ ಭಟ್ ಕಾರ್ಯಕ್ರಮ ನಿರೂಪಿಸಿದರು.