ಮಂಗಳೂರು: ಹಿರಿಯ ವಿದ್ಯಾರ್ಥಿ ಸಂಘ (ರಿ) ಡಾ.ಪಿ ದಯಾನಂದ ಪೈ- ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯ ಪ್ರಯುಕ್ತ ತೆಲಿಕೆ 2022 ಅಂತರ್ ಕಾಲೇಜು ತುಳು ಪ್ರಹಸನ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿ. ವೇದವ್ಯಾಸ ಕಾಮತ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗ ವಲಯದ ಜಂಟಿ ನಿರ್ದೇಶಕರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಲನಚಿತ್ರ ನಟ, ರಂಗಭೂಮಿ ಕಲಾವಿದ ರವಿ ರಾಮಕುಂಜ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ಹಾಗೂ ಸಂಯೋಜಕರಾದ ಡಾ. ಶೇಷಪ್ಪ ಕೆ ಅವರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಯೂಟ್ಯೂಬರ್ ಹಾಗೂ ನಟ ಧನರಾಜ್ ಆಚಾರ್, ಚಲನಚಿತ್ರ ನಟಿ ಶೈಲಶ್ರೀ ಮೂಲ್ಕಿ ಹಾಗೂ ಕಾಮೆಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟ ಯುವ ಶೆಟ್ಟಿ ಅವರು ಸಹಕರಿಸಿದರು. ಖ್ಯಾತ ಗಾಯಕ ಸಂತೋಷ್ ಬೇಂಕ್ಯ, ನಾಟಕ ಕಲಾವಿದೆ ಉಷಾ ದೇವರಾಜ್, ನಟಿ ತುಳುವ ಸಿರಿ ಅಧ್ವಿಕ ಶೆಟ್ಟಿ ಅವರುಗಳು ತಾರಾ ಮೆರುಗನ್ನು ನೀಡಿದರು.
ಗ್ರೀಷ್ಮ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಧೀರಜ್ ಕುಮಾರ್ ವರದಿ ವಾಚಿಸಿದರು. ಡಾ. ಶೇಷಪ್ಪ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತೆಲಿಕೆ 2022 ರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಕುಮಾರ್ ವಿಟ್ಲ ಹಾಗೂ ಮೋಹಿತ್ ಕುಮಾರ್ ಅವರು ನೆರವೇರಿಸಿದರು. ತುಷಾರ್ ಕೆ ಕೋಟೆಕಾರ್ ವಂದಿಸಿದರು.
ಆಲ್ಬಮ್ ಸಾಂಗ್ ಬಿಡುಗಡೆ: ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರ್ಮಾರ್ಗ, ಧೀರಜ್ ಕುಮಾರ್ ಉಳ್ಳಾಲ್ ಹಾಗೂ ಆತ್ಮ ಕೆ. ಹಾಡಿರುವ, ಧೀರಜ್ ಕುಮಾರ್ ಉಳ್ಳಾಲ್ ಸಾಹಿತ್ಯದ, ಚಿದಾನಂದ ಕಡಬ ಸಂಗೀತದ ಹಾಗೂ ಗುರುರಾಜ್ ಬಿ. ಅವರ ಸಂಕಲನದಲ್ಲಿ ಮೂಡಿದ ಸಂಭ್ರಮವ ತಂದಿದೆ ಅಲುಮ್ನಿ ಡೇ ಎಂಬ ಆಲ್ಬಮ್ ಸಾಂಗ್ ಬಿಡುಗಡೆಯಾಯಿತು.
ಫಲಿತಾಂಶ: ಕೆನರಾ ಪಿಯು ಕಾಲೇಜು ಮಂಗಳೂರು ಪ್ರಥಮ ಸ್ಥಾನ, ಪದುವ ಪಿಯು ಕಾಲೇಜು ಮಂಗಳೂರು ದ್ವಿತೀಯ ಹಾಗೂ ವಿಠ್ಠಲ್ ಪಿಯು ಕಾಲೇಜು ವಿಟ್ಲ ತೃತೀಯ ಸ್ಥಾನ ಪಡೆದರು.
ಸುಮಾರು 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜಿನ ಸ್ಪರ್ಧಿಗಳು ಸೇರಿದ್ದರು.