ಹಿರ್ಗಾನ ರಾಧಾಕೃಷ್ಣ ನಾಯಕ್ ಕಳೆದ ವರ್ಷ ಭಾರತ ದೇಶದ ಸೈನಿಕರನ್ನು ತುಚ್ಚವಾಗಿ ನಿಂದಿಸಿ ಪಾಕಿಸ್ತಾನದ ಪರವಾಗಿ ಹಾಕಲಾಗಿದ್ದ ಫೇಸ್ಬುಕ್ ಪೋಸ್ಟ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆಗಳು ನೀಡಿದ ದೂರಿನ ಅನ್ವಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಕಾರ್ಕಳ ಕಾಂಗ್ರೆಸ್ಸಿಗರು ದೇಶದ್ರೋಹಿಯ ಪರ ನಿಂತಿದ್ದು ಪೊಲೀಸರ ವಿರುದ್ಧ ಕೀಳು ಮಟ್ಟದ ಪದಗಳನ್ನು ಉಪಯೋಗಿಸುತ್ತಿರುವುದು ಖಂಡನೀಯ ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುಟ್ಲುಪಾಡಿ ಸುಹಾಸ್ ಶೆಟ್ಟಿ ಹೇಳಿದ್ದಾರೆ.
ಆತನಿಗೆ ಕಠಿಣ ಶಿಕ್ಷೆಯನ್ನು ನೀಡದೆ ಸನ್ಮಾನ ಮಾಡಬೇಕಿತ್ತಾ ಕಾಂಗ್ರೆಸಿಗರೇ? ತಾವು ಭಾರತದ ಪರವೇ ಅಥವಾ ಪಾಕಿಸ್ತಾನದ ಪರವೇ? ಹಿಂದೂ ಧರ್ಮದ ಕುರಿತು ದೇಶದ ಕುರಿತು ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಎಲ್ಲ ದೇಶದ್ರೋಹಿಗಳನ್ನು ಕೂಡ ಇದೇ ರೀತಿ ಶಿಕ್ಷಿಸಬೇಕು. ಕಾಂಗ್ರೆಸ್ಸಿನ ಇತಿಹಾಸವನ್ನು ನೋಡಿದಾಗ ನಿರಂತರವಾಗಿ ಅದು ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಪಕ್ಷದಲ್ಲಿ ಗುರುತಿಸಿಕೊಂಡು, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವ ಗಳಿಗೆ ಬೆಂಬಲವನ್ನು ನೀಡಿಕೊಂಡು ಅಂಥವರನ್ನು ಪೋಷಿಸಿಕೊಂಡು ಬಂದಿರುವಂತದ್ದು ಅದರ ಮುಂದುವರಿದ ಭಾಗವಾಗಿ ಇವತ್ತು ಕಾರ್ಕಳದಲ್ಲಿ ಕೂಡ ದೇಶದ್ರೋಹಿಗಳ ಪರ ಕಾಂಗ್ರೆಸ್ ನಿಂತಿರುವುದು ನಿಜಕ್ಕೂ ವಿಷಾದನೀಯ.
ಕಾರ್ಕಳದ ಅಭಿವೃದ್ಧಿಯ ಬಗ್ಗೆ ಜನಪರ ಚಿಂತನೆಯ ಬಗ್ಗೆ ಒಂದಿಷ್ಟು ಅರಿವಿಲ್ಲದ ಕಾಂಗ್ರೆಸ್ ತನ್ನ ಕಾರ್ಯಕರ್ತನೆಂಬ ಮಾತ್ರಕ್ಕೆ ಒಬ್ಬ ದೇಶದ್ರೋಹಿಯ ಪರ ನಿಂತಿರುವುದು ಕ್ಷಮಿಸಲಾಗದ ಅಪರಾಧ. ಇನ್ನಾದರೂ ಕಾರ್ಕಳದ ಕಾಂಗ್ರೆಸ್ ಬದಲಾಗಿ ದೇಶದ್ರೋಹಿಗಳ ಪರವಿರದೆ ಅಭಿವೃದ್ಧಿಯ ಪರ ಧರ್ಮದ ಪರ ಯೋಚಿಸಬೇಕಾದ ಅನಿವಾರ್ಯತೆ ಇದೆ.
ಕಾರ್ಕಳ ಪೊಲೀಸರ ಪರ ಕಾರ್ಕಳದ ಜನತೆಯ ನೈತಿಕ ಬೆಂಬಲವಿದೆ, ಪೊಲೀಸರು ಇನ್ನಷ್ಟು ದೇಶದ್ರೋಹಿಗಳನ್ನು ಬಂಧಿಸಬೇಕು ಅಷ್ಟು ಮಾತ್ರವಲ್ಲದೆ ದೇಶದ್ರೋಹಿಗಳ ಬೆಂಬಲಿಗರನ್ನು ಬಂಧಿಸಬೇಕೆಂದು ಬಿಜೆಪಿ ಯುವಮೊರ್ಚ ಕಾರ್ಕಳ ಆಗ್ರಹಿಸುತ್ತದೆ ಎಂದು ಮುಟ್ಲುಪಾಡಿ ಸುಹಾಸ್ ಶೆಟ್ಟಿ ಹೇಳಿದ್ದಾರೆ.