ಮೂಡುಬಿದಿರೆ, ನ.29: ತುಮಕೂರಿನ ಕ್ರಿಯೇಟಿವ್ ಈವೆಂಟ್ಸ್ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಆಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿದೆ. ಫೈನಲ್ ಮುಖಾಮುಖಿಯಲ್ಲಿ ಆಳ್ವಾಸ್ ಕಾಲೇಜು ತಂಡವು ಸಹ್ಯಾದ್ರಿ ತಂಡವನ್ನು 35-19 ಹಾಗೂ 35- 24ರ ನೇರ ಸೆಟ್‌ಗಳಿಂದ ಸೋಲಿಸಿತು. ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಚಿನ್ಮಯಿ ತಂಡವನ್ನು 35-17 ಮತ್ತು 35-19 ಅಂಕಗಳಿಂದ ಸೋಲಿಸಿತ್ತು. ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಆಳ್ವಾಸ್ ನಾಕೌಟ್ ಹಂತದ ಸೆಮಿಫೈನಲ್ ಪ್ರವೇಶಿಸಿತ್ತು.
ರಾಜ್ಯಮಟ್ಟದ ಪುರುಷರ ಬಾಲ್‌ಬ್ಯಾಡ್ಮಿಂಟನ್: ಆಳ್ವಾಸ್ ಚಾಂಪಿಯನ್

ರಾಜ್ಯಮಟ್ಟದ ಪುರುಷರ ಬಾಲ್‌ಬ್ಯಾಡ್ಮಿಂಟನ್: ಆಳ್ವಾಸ್ ಚಾಂಪಿಯನ್
Date: