ಕೋಟ: ಶಿರಿಯಾರ ಸ.ಹಿ.ಪ್ರಾ.ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿ ಹಾಗೂ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಉದ್ಘಾಟನೆ, ವರ್ಗಾವಣೆಗೊಂಡ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ ಜರಗಿತು.
ಶಾಲೆಯ ಹಳೆ ವಿದ್ಯಾರ್ಥಿ, ಲಂಡನ್‌ನ ಉದ್ಯೋಗಿ ಗಣೇಶ ಗಾಣಿಗ ಶಿರಿಯಾರ ಕೊಡ ಮಾಡಿದ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ವೇದಮೂರ್ತಿ ಕೊಡೆಕಟ್ಟು ಮಂಜುನಾಥ ಉಪಾಧ್ಯ ಉದ್ಘಾಟಿಸಿ ಶುಭ ಹಾರೈಸಿದರು.
ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅತ್ಯಗತ್ಯ. ನಮ್ಮೂರ ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಊರಿನವರು ಕೈಜೋಡಿಸಬೇಕು ಎಂದರು. ಎಸ್.ಡಿ.ಎಂ.ಸಿ ಅಧ್ಯಕ್ಷ ದಿನಕರ್ ಕಾಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇಲಾಖೆಯಲ್ಲಿ ಭಡ್ತಿ ಪಡೆದು ವರ್ಗಾವಣೆಗೊಂಡ ಶಿಕ್ಷಕಿ ಶುಭ ಎಸ್ ಸುವರ್ಣ ಅವರನ್ನು ಊರವರ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಹಳೆ ವಿದ್ಯಾರ್ಥಿಗಳಾದ ಗುರುಚರಣ ಮತ್ತು ತಂಡದವರು ಕೊಡಮಾಡಿದ ಕಂಪ್ಯೂಟರ್ ಹಸ್ತಾಂತರ ಜರಗಿತು.
ಮುಖ್ಯ ಅತಿಥಿಗಳಾಗಿ ರವೀಂದ್ರನಾಥ ಶೆಟ್ಟಿ ಕೊಳ್ಕೆಬೈಲು, ಸಂದೀಪ್ ಕುಮಾರ್ ಶೆಟ್ಟಿ ಶಿರಿಯಾರ ಮೇಲ್ಮನೆ, ಪ್ರಸಾದ ಶೆಟ್ಟಿ ಕೊಳ್ಕೆಬೈಲು, ಪ್ರದೀಪ್ ಕುಮಾರ್ ಶೆಟ್ಟಿ ಕೊಳ್ಕೆಬೈಲು, ಆನಂದ ಮರಕಾಲ ಶಿರಿಯಾರ, ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೀವ ಮರಕಾಲ, ಬಾಲಕೃಷ್ಣ ಶೆಟ್ಟಿ ಎತ್ತಿನಟ್ಟಿ, ಲಕ್ಷ್ಮಣ ಎಚ್.ಎಸ್., ವಾಸುದೇವ. ಕೆ., ಗ್ರಾ.ಪಂ. ಉಪಾಧ್ಯಕ್ಷೆ ಅಮಿತಾ, ಸದಸ್ಯ ಸಂಜೀವ ಪೂಜಾರಿ, ಭಾರತಿ, ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉದಯ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಮೊಗವೀರ, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಗಾಣಿಗ, ವಿಜಯ್ ಕುಮಾರ್ ಮತ್ತು ಶಿಕ್ಷಕರು, ಊರಿನವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಸಾಧು ಸೇರಿಗಾರ್ ಬೆನಗಲ್ ಸ್ವಾಗತಿಸಿ, ವಾಣಿಶ್ರೀ ವಂದಿಸಿದರು. ಸಹ ಶಿಕ್ಷಕಿ ಶೀಲಾ ಕಾರ್ಯಕ್ರಮ ನಿರೂಪಿಸಿದರು.