ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ಉಡುಪಿಯ ಸ್ಪೀಡ್ ಡೆವಿಲ್ಸ್ ಯುವಕರ ತಂಡ ಅಹಾರ ಕಿಟ್ ವಿತರಿಸಿದೆ. ಉಡುಪಿ ತಾಲೂಕಿನ ಸುಮಾರು 1,250 ಅರ್ಹ ಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್ ಗಳನ್ನು ಮನೆ ಮನೆಗೆ ತೆರಳಿ ಮುಟ್ಟಿಸಲಾಗಿದೆ. ಉಡುಪಿ ಹಾಗೂ ಕಾರ್ಕಳದ ಅಶ್ರಮಗಳಿಗೂ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ರೋವಿನ್ ವಿನೂತ್, ಸುಶಾನ್ ಡಿ, ಲತೇಶ್ ಶೆಟ್ಟಿ, ಅಶುತೋಷ್ ಶೆಟ್ಟಿ, ಶರಣ್ ಶೆಟ್ಟಿ, ಸುಖಿಲ್ ಪೂಜಾರಿ, ಜಾವೆದ್, ರಾಕೇಶ್, ರಕ್ಷಾ ಸೋನ್ಸ್, ಗುರುಚರಣ್ ಇಂದ್ರಾಳಿ, ಪೂರ್ಣಚಂದ್ರ, ಸ್ವಾತಿ ಲತೇಶ್ ಶೆಟ್ಟಿ, ನವ್ಯಾಶರಣ್ ಶೆಟ್ಟಿ, ನಿಶಾ ಡಿಸೋಜ ಮುಂತಾದವರು ಕಿಟ್ ವಿತರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.