ಉಡುಪಿ: ಜಿಲ್ಲೆಯ ಯುವಕರ ಪ್ರತಿಭೆಯನ್ನು ತೊರ್ಪಡಿಸಲು, ದೇಶಭಕ್ತಿ ಮತ್ತು ರಾಷ್ಟ್ರನಿರ್ಮಾಣದಲ್ಲಿ ಯುವಜನರು ಕುರಿತ ಭಾಷಣ ಸ್ಪರ್ಧೆಯನ್ನು ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಈ ಸ್ಪರ್ಧೆಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಜಿಲ್ಲಾ ಮಟ್ಟದ ನೆಹರು ಯುವ ಕೇಂದ್ರಗಳಿಗೆ ವಹಿಸಲಾಗಿರುತ್ತದೆ.

ಬಹುಮಾನಗಳ ವಿವರ: ತಾಲೂಕು ಮಟ್ಟದಲ್ಲಿ ಆಯ್ಕೆಯಾದ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಪ್ರಶಸ್ತಿ ಪತ್ರ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿಜೇತರಿಗೆ ಪ್ರಥಮಬಹುಮಾನವಾಗಿ 5000 ರೂ., ದ್ವಿತೀಯಬಹುಮಾನವಾಗಿ 2,000 ರೂ., ಹಾಗೂ ತೃತೀಯ ಬಹುಮಾನವಾಗಿ 1,000 ರೂ. ನೀಡಲಾಗುವುದು.


ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ವಿಜೇತರಿಗೆ ಪ್ರಥಮ ಬಹುಮಾನವಾಗಿ 25,000 ರೂ., ದ್ವಿತೀಯ ಬಹುಮಾನವಾಗಿ 10,000 ರೂ. ಹಾಗೂ ತೃತೀಯ ಬಹುಮಾನವಾಗಿ 5,000 ರೂ. ಮತ್ತು ರಾಷ್ಟ್ರಮಟ್ಟದಲ್ಲಿ ವಿಜೇತರುಗಳಿಗೆ ಪ್ರಥಮ ಬಹುಮಾನವಾಗಿ 2 ಲಕ್ಷ ರೂ., ದ್ವಿತೀಯ ಬಹುಮಾನವಾಗಿ 1 ಲಕ್ಷ ರೂ. ಹಾಗೂ ತೃತೀಯ ಬಹುಮಾನವಾಗಿ 50,000 ರೂ. ನೀಡಲಾಗುವುದು.
ಭಾಷಣದ ವಿಷಯ: “Patriotism and Nation Building” with the Theme Sabka
Saath, Sabka Vikas, Sabka Vishwas (Together we Grow, We Prosper, Together we Build a Strong and Inclusive India).


ಭಾಷಣ ಸ್ಪರ್ಧೆಗೆ 9-10 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿದ್ದು, ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರ ಭಾಷಣ ಮಾಡಲು ಅವಕಾಶ ಇರುತ್ತದೆ.
ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯು ನಡೆಯುವ ಸ್ಥಳ ಹಾಗೂ ಸಂಪರ್ಕಿಸಬೇಕಾದ ವ್ಯಕ್ತಿಗಳ ವಿವರ:- ಕುಂದಾಪುರ, ಬೈಂದೂರು ತಾಲೂಕುಗಳಿಗೆ ಸಂಬಂಧಿಸಿದಂತೆ ನವೆಂಬರ್ 25 ರಂದು ಬೆಳಗ್ಗೆ 10.30 ಕ್ಕೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದ್ದು, ಎನ್.ಎಸ್.ಎಸ್ ಅಧಿಕಾರಿ ಅರುಣ್ ಕುಮಾರ್ ಮೊ.ನಂ. 9480396456 / 9972404202, ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ನವೆಂಬರ್ 26 ರಂದು ಬೆಳಗ್ಗೆ 11 ಗಂಟೆಗೆ ನಗರದ ಎಂ.ಜಿ.ಎಂ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದ್ದು, ಎನ್.ಎಸ್.ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್ ಮೊ.ನಂ: 8884323443 / 9739430331 ಹಾಗೂ ಕಾರ್ಕಳ, ಹೆಬ್ರಿ ತಾಲೂಕುಗಳಿಗೆ ಸಂಬಂಧಿಸಿದಂತೆ ನವೆಂಬರ್ 27 ರಂದು ಬೆಳಗ್ಗೆ 11 ಗಂಟೆಗೆ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದ್ದು, ಎನ್.ಎಸ್.ಎಸ್ ಅಧಿಕಾರಿ ಸುಚಿತ್ರಾ ಮೊ.ನಂ: 8197488357 ನ್ನು ಸಂಪರ್ಕಿಸಬಹುದಾಗಿದೆ.


ಭಾಷಣ ಸ್ಪರ್ಧೆಯಲ್ಲಿ 18 ರಿಂದ 29 ವರ್ಷದೊಳಗಿನ ಯುವಜನರು ಭಾಗವಹಿಸಬಹುದಾಗಿದ್ದು, ಕಡ್ಡಾಯವಾಗಿ ಉಡುಪಿ ಜಿಲ್ಲೆಯ ನಿವಾಸಿಗಳಾಗಿರಬೇಕು. ಸ್ಪರ್ಧಾಳುಗಳು ತಮ್ಮ 01 ಪಾಸ್ಪೋರ್ಟ್ ಸೈಜ್ ಪೋಟೊ, ಆಧಾರ್ ಕಾರ್ಡ್ (ಕಡ್ಡಾಯವಾಗಿ) ಪ್ರತಿ, ಪ್ಯಾನ್ ಕಾರ್ಡ್/ ಶಾಲಾ ಕಾಲೇಜಿನಿಂದ ಅಥವಾ ಆಫೀಸ್/ಸಂಸ್ಥೆಗಳಿಂದ ಜಾರಿಯಾದ ಅಧಿಕೃತ ಫೋಟೊ ಇರುವ ಗುರುತಿನ ಚೀಟಿಯನ್ನು, ವಯೋಮಿತಿಯ ತಪಾಸಣೆಗಾಗಿ ಅಗತ್ಯವಾಗಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರದ ದೂರವಾಣಿ ಸಂಖ್ಯೆ: 0820-2574992 ಅಥವಾ ಇ-ಮೇಲ್ [email protected] ನ್ನು ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ವಿಲ್ಫ್ರೆಡ್ ಡಿ ಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.