Sunday, January 19, 2025
Sunday, January 19, 2025

ಪ್ರೇಕ್ಷಕರ ಕಣ್ಮನ ತಣಿಸಿದ ಚಿತ್ರಸಂತೆ

ಪ್ರೇಕ್ಷಕರ ಕಣ್ಮನ ತಣಿಸಿದ ಚಿತ್ರಸಂತೆ

Date:

ಕೋಟ: ನೂರಾರು ಮಕ್ಕಳ ಕಲರವ, ಅಲ್ಲಲ್ಲಿ ಮಕ್ಕಳ ಕುಂಚದಲ್ಲಿ ಮೂಡಿಬಂದ ಚಿತ್ರಗಳು, ವಿವಿಧ ಕಲಾಕೃತಿಗಳು, ಬೊಂಬೆಗಳು, ಆಟಿಕೆ ವಸ್ತುಗಳು, ಶೃಂಗಾರದ ವಸ್ತುಗಳು, ಸೆಲ್ಪಿ ತೆಗೆದುಕೊಳ್ಳಲು ರಂಗು ರಂಗಿನ ವಿನ್ಯಾಸದ ವಸ್ತುಗಳು, ಅಲ್ಲದೇ ವಿಶೇಷ ಎನ್ನುವಂತೆ ಇದನ್ನು ತಯಾರಿಸಿದ ಮಕ್ಕಳೇ ಬಂದು ಪ್ರೇಕ್ಷಕರಿಗೆ ಮಾರುತ್ತಿದ್ದರು ಒಂದು ರೀತಿಯ ಜಾತ್ರೆಯಲ್ಲಿಯೋ ಸಂತೆಯಲ್ಲಿಯೋ ಇದ್ದಿವಿ ಎನ್ನುವ ಭ್ರಮೆ ನಮ್ಮ ಮುಂದೆ.

ಇಂತಹ ಸೊಬಗಿಗೆ ಸಾಕ್ಷಿಯಾದದ್ದು ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಚಿತ್ರ ಸಂತೆ. ಹೌದು ಇದು ಕಂಡು ಬಂದದು ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಚಿಲುಮೆ-2021(ಭರವಸೆಯ ತಂಗಾಳಿ) ಕಾರ್ಯಕ್ರಮದ ಚಿತ್ರಸಂತೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.

ಸುಮಾರು 250 ಮಕ್ಕಳು ತಯಾರಿಸಿದ ಪೈಟಿಂಗ್ಸ್, ಕಲಾಕೃತಿಗಳು ಕಲಾತ್ಮಕವಾಗಿ ಜೋಡಿಸಿಟ್ಟು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿ ಇಟ್ಟು, ಮಕ್ಕಳೇ ತಾವು ತಯಾರಿಸಿದ ಕಲಾಕೃತಿಗೆ ಹಾಗೂ ಇನ್ನಿತರ ವಸ್ತುಗಳಿಗೆ ತಾವೇ ಬೆಲೆ ನಿಗದಿ ಪಡಿಸಿ ಮಾರುತ್ತಿದ್ದರು.

ಮಕ್ಕಳ ಕೈಚಳಕದಲ್ಲಿ ಮೂಡಿ ಬಂದ ಈ ಚೆಂದಕ್ಕೆ ಪ್ರೇಕ್ಷಕರು ಬೆರಗಾಗಿದ್ದು ಸುಳ್ಳಲ್ಲ. ಈ ಚಿತ್ರ ಸಂತೆಯಲ್ಲಿ ಇಷ್ಟೇ ಅಲ್ಲದೇ ಮೆಹಂದಿ ಹಚ್ಚುವಿಕೆ, ಟ್ಯಾಟೋ, ವ್ಯಂಗ್ಯಚಿತ್ರ ರಚನೆ ಎಲ್ಲರ ಗಮನ ಸೆಳೆದು ಸಂಭ್ರಮಿಸುವುದು ಕಂಡು ಬಂತು. ಇದರ ಹಿಂದೆ ಚಿತ್ರಕಲಾ ಶಿಕ್ಷಕರಾದ ಗಿರೀಶ್ ಆಚಾರ್ಯ ವಕ್ವಾಡಿ, ಕುಮಾರ್, ಮೇಘ, ನಿಶ್ಮಿತಾ ಹಾಗೂ ವಿದ್ಯಾರ್ಥಿಗಳ ಪೋಷಕರ ಅವರ ಶ್ರಮ ಮರೆಯುವಂತಿಲ್ಲ.

ವಿಶೇಷ ಅಂಚೆ ಚೀಟಿ ಪ್ರದರ್ಶನ: ಕನ್ನಡ ನಾಡು ನುಡಿ ಪ್ರತಿಬಿಂಬಿಸುವ ಹಾಗೂ ಮಕ್ಕಳ ದಿನಾಚರಣೆಯ ವಿಶೇಷತೆ ಒಳಗೊಂಡ ಅಂಚೆ ಚೀಟಿ ಪ್ರದರ್ಶನವನ್ನು ಕಲ್ಯಾಣಪುರ ಲಕ್ಷ್ಮೀನಾರಾಯಣ ನಾಯಕ್ ಅವರು ಪ್ರದರ್ಶಿಸಿದರು. ಅಲ್ಲದೇ ವಿವಿಧ ದೇಶಗಳ ಅಂಚೆ ಚೀಟಿ, ಮತ್ತು ನಾಣ್ಯಗಳ ಪ್ರದರ್ಶನ ಹಾಗೂ ಭಾರತದಲ್ಲಿ ಬಿಡುಗಡೆಗೊಂಡಿರುವ ಹೊಸ ನಾಣ್ಯ ಆಕರ್ಷಿಸಿದವು.

ಮಕ್ಕಳ ದಿನಾಚರಣೆಯನ್ನು ಮಕ್ಕಳ ಸಂಭ್ರಮಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಆಯೋಜಿಸಿದ ಆಯೋಜಕರ ಪ್ರಯತ್ನವನ್ನು ಶ್ಲಾಘಿಸಲೇಬೇಕು. ಒಟ್ಟಿನಲ್ಲಿ ಆಗಮಿಸಿದ ಪ್ರೇಕ್ಷಕರ ಕಣ್ಮನ ತಣಿಸುವಲ್ಲಿ ಚಿತ್ರಸಂತೆ ಯಶಸ್ಸಗಾಗಿದೆ ಎಂಬುವುದು ಸಂತಸದ ವಿಷಯ.

“ಕಾಣದೆ ಇರುವುದನ್ನು ಕಲ್ಪಿಸಿಕೊಂಡು, ಕಾಣುವುದನ್ನು ನೋಡಿಕೊಂಡು ಕಂಡಿರುವುದನ್ನು ಊಹಿಸಿಕೊಂಡು ಅದನ್ನು ಕಾಣುವಂತೆ ಮತ್ತು ನೋಡುವಂತೆ ಮೂಡಿಸಿರುವುದು ಚಿತ್ರಸಂತೆಯ ವಿಶೇಷ. ಮಕ್ಕಳ ನೈಜ ಪ್ರತಿಭೆ ಬಿತ್ತರಗೊಳ್ಳಲು ವೇದಿಕೆ ಕಲ್ಪಿಸಿದ ಆಯೋಜಕರು ಶ್ಲಾಘನೀಯನಕ್ಕೆ ಅರ್ಹರು.”- ರಾಜಶೇಖರಮೂರ್ತಿ, ತಹಶೀಲ್ದಾರರು ಬ್ರಹ್ಮಾವರ.

“ಮಕ್ಕಳಲ್ಲಿ ತಮಗೆ ಅರಿವು ಇಲ್ಲದೇ ಹಲವಾರು ಪ್ರತಿಭೆ ಅಡಕವಾಗಿರುತ್ತದೆ, ಅದನ್ನು ಮುಖ್ಯವಾಹಿನಿಗೆ ತರಬೇಕಾದ್ದು ನಮ್ಮ ಕೆಲಸ. ಈ ನಿಟ್ಟಿನಲ್ಲಿ ಚಿತ್ರಸಂತೆ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿ ಅವರ ಕಲೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ನಮ್ಮದು”.- ಗಿರೀಶ್ ಆಚಾರ್ಯ ವಕ್ವಾಡಿ, ಸಂಚಾಲಕರು, ಕ್ರೀಯೆಟಿವ್ ಸ್ಕೂಲ್ ಆಫ್ ಆರ್ಟ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!