ಮಣಿಪಾಲ: ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಜುಲಾಯಿ 26ರಂದು ಮಧ್ಯಾಹ್ನ 12 ಗಂಟೆಗೆ ರೇಡಿಯೋ ಮಣಿಪಾಲ್ 90.4 MHz ಸಮುದಾಯ ಬಾನುಲಿಯಲ್ಲಿ ಪ್ರಸಾರವಾಗಲಿರುವ ವಿಶೇಷ ಸಂದರ್ಶನದಲ್ಲಿ ಕಾರ್ಗಿಲ್ ಯೋಧರಾಗಿದ್ದ ಕಾರ್ಕಳದ ಫಾರೆಸ್ಟ್ ಗಾರ್ಡ್ ಮಲ್ಲಯ್ಯ ಮಠಪತಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 5 ಗಂಟೆಗೆ ಇದರ ಮರುಪ್ರಸಾರವಿರುವುದು ಎಂದು ರೇಡಿಯೋ ಮಣಿಪಾಲ್ ಪ್ರಕಟಣೆ ತಿಳಿಸಿದೆ.