ಮಣಿಪಾಲ: ಇಂದಿನ ಕಾಲಘಟ್ಟದಲ್ಲಿ ಸ್ವ ಉದ್ಯೋಗಕ್ಕೆ ತನ್ನದೇ ಆದ ಮಹತ್ವವಿದ್ದು ಸ್ವ ಉದ್ಯೋಗವನ್ನು ಪ್ರೋತ್ಸಾಹಿಸಲು ಸರಕಾರ ಮತ್ತು ಬ್ಯಾಂಕಿನಿಂದ ಹಲವಾರು ಯೋಜನೆಗಳಿವೆ. ಆ ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡು ಆಸಕ್ತಿ ಮತ್ತು ಶ್ರದ್ಧೆಯಿಂದ ಮುಂದುವರಿದಲ್ಲಿ ಯಶಸ್ವಿ ಸ್ವಾವಲಂಬಿ ಜೀವನ ನಡೆಸಬಹುದು ಮತ್ತು ಎಂದು ಉಡುಪಿ ಜಿಲ್ಲಾ ಅಗ್ರಣೀಯ ಮುಖ್ಯ ಪ್ರಬಂಧಕರಾದ ಪಿ.ಎಮ್ ಪಿಂಜಾರ್ ಹೇಳಿದರು.
ಅವರು ಮಣಿಪಾಲದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ್ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆಯಲಿರುವ ಉಚಿತ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಸಾಲವನ್ನು ಪಡೆಯಬೇಕಾದರೆ ಯಾವ ರೀತಿ ಪೂರ್ವತಯಾರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಸಂಸ್ಥೆಯ ನಿರ್ದೇಶಕರಾದ ಸವಿತಾ ಎಸ್ ನಾಯಕ್ ಸ್ವಾಗತಿಸಿ, ತರಬೇತಿಯ ಅವಧಿಯಲ್ಲಿ ತಿಳಿಸಲಾಗುವ ವಿಷಯಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಕಛೇರಿ ಸಹಾಯಕ ಸಂತೋಷ್ ವಂದಿಸಿದರು. ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.