Saturday, January 25, 2025
Saturday, January 25, 2025

ಪುರಾತತ್ವದೊಂದಿಗಿನ ಸಂಬಂಧ ಸರಣಿ ಕಾರ್ಯಕ್ರಮ

ಪುರಾತತ್ವದೊಂದಿಗಿನ ಸಂಬಂಧ ಸರಣಿ ಕಾರ್ಯಕ್ರಮ

Date:

ಭಟ್ಕಳ: ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಶ್ರೀ ಮಹಾಗಣಪತಿ ಮಹಾಮಾಯ ದೇವಸ್ಥಾನ ಶಿರಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಪುರಾತತ್ವದೊಂದಿಗಿನ ಸಂಬಂಧ ಸರಣಿ ಕಾರ್ಯಕ್ರಮವು ‘ಸಂಗೀತಪುರ’ ಎನ್ನುವ ಶೀರ್ಷಿಕೆಯಡಿಯಲ್ಲಿ ಎರಡು ದಿನಗಳ ಕಾಲ ಉತ್ತರ ಕನ್ನಡಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆಯಿತು.

ನಮ್ಮ ನಡುವಿನ ಇತಿಹಾಸ, ಕಲೆ ಹಾಗೂ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಈ ಸರಣಿ ಕಾರ್ಯಕ್ರಮದಲ್ಲಿ ಪುರಾತನ ಹಿಂದೂ ಜೈನ ಮುಸ್ಲಿಂ ವಾಸ್ತು ಶಿಲ್ಪ, ಕಾವಿಕಲೆ, ಇನ್ನಿತರ ಶಿಲ್ಪಗಳ ಅಧ್ಯಯನ ಮತ್ತು ದಾಖಲಾತಿಯನ್ನು ಒಳಗೊಂಡಿತ್ತು.

ಪಾಶ್ಚಿಮಾತ್ಯರೊಂದಿಗಿನ ವ್ಯಾಪಾರದ ಕೇಂದ್ರವಾಗಿದ್ದ ಭಟ್ಕಳ ತಾಲೂಕಿನ ಕೇತಪ್ಪ ನಾರಾಯಣ ದೇವಾಲಯ, ಶಾಂತಪ್ಪ ತಿರುಮಲ ದೇವಾಲಯ, ಜಟ್ಟಪ್ಪ ನಾಯಕ ಚಂದ್ರ ನಾಥೇಶ್ವರ ಬಸದಿ, ಭಟ್ಕಳದಲ್ಲಿನ ಮಸೀದಿ, ಸುಮಾರು 150-200 ವರ್ಷಗಳಷ್ಟು ಹಳೆಯ ಹಲವಾರು ಮನೆಗಳು ಮೊದಲಾದ ಹಲವಾರು ಪಾರಂಪರಿಕ ಕಟ್ಟಡಗಳನ್ನು ಸಂದರ್ಶಿಸಲಾಯಿತು.

ಶಿರಾಲಿಯ ಮಹಾಗಣಪತಿ ಮಹಾಮಾಯ ದೇವಾಲಯದಲ್ಲಿನ ಇಂಡೋ-ಯುರೋಪಿಯನ್ ಮರಾಠ ವಾಸ್ತುಶಿಲ್ಪದ ಕಟ್ಟಡದಲ್ಲಿನ ಕಾವಿ ಬಿತ್ತಿಚಿತ್ರಕಲೆಯ ಪ್ರಭಾವ-ಪರಿಣಾಮ ಮತ್ತು ಇದನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.

ವಿಜಯನಗರ ಸಾಮ್ರಾಜ್ಯದ ಸಾಲ್ವ ಅರಸರ ನೆಲೆವೀಡಾಗಿದ್ದ ಸಂಗೀತ ಪುರ (ಹಾಡುವಳ್ಳಿ) ಒಂದು ಕಾಲದಲ್ಲಿ ಗತವೈಭವವನ್ನು ಮೆರೆದ ನಾಡಾಗಿತ್ತು. ಹಾಡುವಳ್ಳಿ ಇಲ್ಲಿನ ಪ್ರಾಚೀನ ಸ್ಮಾರಕಗಳು ಹಾಗೂ ಅವಶೇಷಗಳನ್ನು ಸಂದರ್ಶಿಸಲಾಯಿತು.

ಪಾಂಡವರ ಕಾಲದಲ್ಲಿ ಭೀಮ ಪ್ರತಿಷ್ಠಾಪಿಸಿದ ಎನ್ನಲಾಗುವ ಕದಂಬರ ಕಾಲದಲ್ಲಿ ನಿರ್ಮಾಣಗೊಂಡಿರುವ ಭೀಮೇಶ್ವರದ ಭೀಮೇಶ್ವರ ದೇವಾಲಯ ಜಲಪಾತದೊಂದಿಗೆ ಸುಂದರ ರಮಣೀಯ ಪ್ರಕೃತಿಯ ವಾತಾವರಣದಲ್ಲಿ ನೆಲೆನಿಂತಿದೆ.

ಕಲಾವಿದರು, ಛಾಯಾಗ್ರಹಕರು, ಇತಿಹಾಸ ಹಾಗೂ ವಾಸ್ತುಶಿಲ್ಪದ ಅಧ್ಯಯನಾಸಕ್ತರು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ಇತಿಹಾಸವನ್ನು ಇನ್ನೊಮ್ಮೆ ಮನನ ಮಾಡಿಕೊಳ್ಳುತ್ತಾ ಹಾಗೂ ನಮ್ಮಲ್ಲಿನ ಪುರಾತನ ವಾಸ್ತುಶಿಲ್ಪ ಹಾಗೂ ಕಲೆಯ ದಾಖಲೆಯನ್ನು ಇನ್ನಷ್ಟು ತಿಳಿದುಕೊಂಡರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಉತ್ತಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜ.24: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ "ವಾಣಿಜ್ಯ ಮೇಳ -...

ಜ.25: ಉಡುಪಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಜ.24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಉಡುಪಿ...

ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು: ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ

ಉಡುಪಿ, ಜ.24: ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು...

ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಿಗೆ ಆಹ್ವಾನ

ಉಡುಪಿ, ಜ.24: ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಇವರನ್ನು ನವದೆಹಲಿಯ...
error: Content is protected !!