ಕೋಟ: ಶ್ರೀ ವಿನಾಯಕ ಯುವಕ ಮಂಡಲ (ರಿ.) ಸಾಯ್ಬ್ರಕಟ್ಟೆ–ಯಡ್ತಾಡಿ ವತಿಯಿಂದ ನಡೆಯುವ ಹತ್ತನೇ ವರ್ಷದ ಶಾರದ ಮಹೋತ್ಸವ ಅ.15 ಶುಕ್ರವಾರದಂದು ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಯ್ಬ್ರಕಟ್ಟೆಯ ತ.ವೇ.ಶಂ.ವಿಶ್ವನಾಥ ಜೋಯಿಸ ಸಭಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 8.30 ಕ್ಕೆ ಪೂರ್ಣಕುಂಭ ಕಲಸ ಹಾಗೂ ವಿಶೇಷ ಚಂಡೆ ವಾದನದೊಂದಿಗೆ ಶ್ರೀ ಶಾರದಾಂಬೆಯ ಪುರಪ್ರವೇಶ, 8.50ಕ್ಕೆ ಶಾರದ ವಿಗ್ರಹ ಪ್ರತಿಷ್ಠಾಪನೆ, 9.30 ಕ್ಕೆ ಭಜನಾ ಕಾರ್ಯಕ್ರಮ, 10 ಗಂಟೆಗೆ ದುರ್ಗಾಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ, 12.30ಕ್ಕೆ ಮಹಾಅನ್ನಸಂತರ್ಪಣೆ, 1.30 ಕ್ಕೆ ಶ್ರೀ ಸುರೇಶ್ ಕಾರ್ಕಡ ಬಳಗದವರಿಂದ “ಸ್ವರಾಂಜಲಿ” ಸಾಂಸ್ಕೃತಿಕ ಕಾರ್ಯಕ್ರಮ, 2.45 ಕ್ಕೆ ಮಹಿಳೆಯರು ಮತ್ತು ಮಕ್ಕಳಿಗಾಗಿ ಮನೋರಂಜನಾ ಆಟೋಟ ಸ್ಪರ್ಧೆಗಳು, 3.15 ಕ್ಕೆ ಮೊಸರು ಕುಡಿಕೆ, ಸಂಜೆ 4.30 ಕ್ಕೆ ರಂಗಪೂಜೆ, ಸಂಜೆ 5.30 ಕ್ಕೆ ಶ್ರೀ ಶಾರದಾಂಬೆಯ ವೈಭವದ ಶೋಭಯಾತ್ರೆಯ ಮೂಲಕ ಜಲಸ್ತಂಭನ ನಡೆಯಲಿದೆ.
ಕಾರ್ಯಕ್ರಮಗಳು ಕೋವಿಡ್ ಮುನ್ನೆಚ್ಚರಿಕೆ ಮಾರ್ಗಸೂಚಿಯನ್ವಯ ನಡೆಯಲಿದ್ದು, ಶಾರದೋತ್ಸವಕ್ಕೆ ಆಗಮಿಸಿ ಸಹಕರಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.